ಮೈಸೂರು, ಸೆಪ್ಟೆಂಬರ್ 20: ರಾಜ್ಯದಲ್ಲಿ ಸಿಎಂ ಬದಲಾವಣೆಯ ಕುರಿತ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಮುಂದಿನ ಸಿಎಂ ಹೆಚ್.ಸಿ ಮಹದೇವಪ್ಪ (H.C Mahadevappa) ಎಂದು ಜನ ಘೋಷಣೆ ಕೂಗಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಸಿಎಂ ಸಿದ್ದರಾಮಯ್ಯನವರ ತವರಲ್ಲೇ ಹೆಚ್.ಸಿ ಮಹದೇವಪ್ಪನವರ ಬೆಂಬಲಿಗರಿ ಮುಂದಿನ ಸಿಎಂ ಮಹದೇವಪ್ಪ ಸಾಹೇಬ್ರು ಎಂದು ಜೋರಾಗಿ ಘೋಷಣೆಯನ್ನು ಕೂಗಿದ್ದಾರೆ. ಇರೋದು ಒಂದೇ ಕುರ್ಚಿ ಅದರಲ್ಲಿ ಸಿಎಂ ಸಿದ್ದರಾಮಯ್ಯ ಭದ್ರವಾಗಿ ಕುಳಿತಿದ್ದಾರೆ. ಬಳಿಕ ಮಾತನಾಡಿದ ಅವರು 2028 ರ ವರೆಗೂ ಆ ಕುರ್ಚಿ ಭದ್ರವಾಗಿಯೇ ಇರುತ್ತೆ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ