Padma Vibhushan Awardee SM Krishna: ಹಿರಿಯ ಮುತ್ಸದ್ದಿ ನಿವಾಸಕ್ಕೆ ಭೇಟಿ ನೀಡಿ ಸತ್ಕರಿಸಿದ ನಳಿನ್ ಕುಮಾರ್ ಕಟೀಲ್ ಮತ್ತು ಬಿಎಲ್ ಸಂತೋಷ್

|

Updated on: Feb 04, 2023 | 11:35 AM

ಸಂತೋಷ್ ಮತ್ತು ನಳಿನ್ ಮನೆಯೊಳಗೆ ಬರುತ್ತಿದ್ದಂತೆಯೇ ಕೃಷ್ಣ ಅವರು ಬೋಕೆಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಮನೆ ಒಳಭಾಗದಲ್ಲಿ ನಳಿನ್ ಅವರು ಕೃಷ್ಣ ಅವರಿಗೆ ಬೋಕೆ ನೀಡಿ, ಶಾಲು ಹೊದೆಸಿ, ಪೇಟ ತೊಡಿಸಿ ಸನ್ಮಾನಿಸಿದರು.

ಬೆಂಗಳೂರು:  ಪದ್ಮವಿಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿರುವ ರಾಷ್ಟ್ರ ರಾಜಕಾರಣದ ಹಿರಿಯ ಮುತ್ತದ್ದಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎಸ್ ಎಮ್ ಕೃಷ್ಣ (SM Krishna) ಅವರ ನಿವಾಸಕ್ಕೆ ಶನಿವಾರ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ (BL Santosh) ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಭೇಟಿ ನೀಡಿ ಶ್ರೀಯುತರನ್ನು ಸನ್ಮಾನಿಸಿದರು. ಸಂತೋಷ್ ಮತ್ತು ನಳಿನ್ ಮನೆಯೊಳಗೆ ಬರುತ್ತಿದ್ದಂತೆಯೇ ಕೃಷ್ಣ ಅವರು ಬೋಕೆಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಮನೆ ಒಳಭಾಗದಲ್ಲಿ ನಳಿನ್ ಅವರು ಕೃಷ್ಣ ಅವರಿಗೆ ಬೋಕೆ ನೀಡಿ, ಶಾಲು ಹೊದೆಸಿ, ಪೇಟ ತೊಡಿಸಿ ಸನ್ಮಾನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ