ಬೆಂಗಳೂರು ಮೆಟ್ರೋದಲ್ಲಿ ಪ್ರೇಮಿಗಳ ರೋಮ್ಯಾನ್ಸ್, ನೆಟ್ಟಿಗರು ಫುಲ್ ಗರಂ: ಸಾರ್ವಜನಿಕರ ಮುಂದೆ ಮೈಮರೆತ ಯುವ ಜೋಡಿ
ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಕೆ.ಆರ್.ಪುರಂ ಮಾರ್ಗದಲ್ಲಿ ಪ್ರಯಾಣಿಕರ ಕಣ್ಮುಂದೆಯೇ ಯುವ ಜೋಡಿಯೊಂದು ಅಪ್ಪಿ-ಕಿಸ್ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ದೆಹಲಿ ಮೆಟ್ರೋ ಮಾದರಿಯಲ್ಲೇ ಬೆಂಗಳೂರಿನಲ್ಲೂ ಇಂತಹ ಘಟನೆ ನಡೆದಿದ್ದು, ನೆಟ್ಟಿಗರು ಬಿಎಂಆರ್‌ಸಿಎಲ್ ವಿರುದ್ಧ ಕಿಡಿಕಾರಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆಗೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.
ಬೆಂಗಳೂರು, ಜು.14: ದಿನ ಕಳೆದಮತೆ ಬೆಂಗಳೂರು ಮೆಟ್ರೋದಲ್ಲಿ ಒಂದಲ್ಲ ಒಂದು ಅವ್ಯವಸ್ಥೆಗಳು ಎದ್ದು ಕಾಣುತ್ತಿದೆ. ದೇಶದ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ಪ್ರೇಮಿಗಳ ಅಸಭ್ಯ ವರ್ತನೆ ಹಾಗೂ ಲವ್ವಿ-ಡವ್ವಿ ದೃಶ್ಯಗಳು ವೈರಲ್ ಆಗುತ್ತಿತ್ತು. ಆದರೆ, ಇದೀಗ ಅಂತಹದ್ದೇ ಒಂದು ಘಟನೆ ಸಿಲಿಕಾನ್ ಸಿಟಿಯ ‘ನಮ್ಮ ಮೆಟ್ರೋ’ (Namma Metro) ರೈಲಿನಲ್ಲೂ ನಡೆದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸರಿಯಾದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ, ಸಹ ಪ್ರಯಾಣಿಕರ ಕಣ್ಣೆದುರಲ್ಲೇ ಯುವ ಜೋಡಿಯೊಂದು ಅತಿಯಾಗಿ ಮೈಮರೆತು ವರ್ತಿಸಿದ್ದಾರೆ. ಈ ಘಟನೆಯು ಕೆ.ಆರ್. ಪುರಂ (K.R. Puram) ಕಡೆಗೆ ಸಂಚರಿಸುತ್ತಿದ್ದ ಮೆಟ್ರೋ ರೈಲಿನ ಬೋಗಿಯೊಳಗೆ ನಡೆದಿದೆ. ಪ್ರಯಾಣಿಕರು ತುಂಬಿದ್ದರೂ ಸಹ, ಅದಾವುದನ್ನೂ ಲೆಕ್ಕಿಸದ ಪ್ರೇಮಿಗಳು ಪರಸ್ಪರ ಅಪ್ಪಿಕೊಂಡು ಕಿಸ್ (Kiss) ಮಾಡಿದ್ದಾರೆ. ಈ ಅಸಭ್ಯ ವರ್ತನೆಯನ್ನು ಕಂಡು ಅಸಮಾಧಾನಗೊಂಡ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಇಡೀ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಬಿಎಂಆರ್‌ಸಿಎಲ್ (BMRCL) ಮತ್ತು ಬೆಂಗಳೂರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದು ಸಾರ್ವಜನಿಕ ಸಾರಿಗೆಯೋ ಅಥವಾ ಪ್ರೇಮಿಗಳ ಖಾಸಗಿ ಜಾಗವೋ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ನಟರಾಜ್ ಬೆಂಗಳೂರು
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ