ಮೈಸೂರು, ಏ.14: ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಇಂದು(ಏ.14) ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ(BJP) ಸಮಾವೇಶ ಹಮ್ಮಿಕೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಆಗಮಿಸಿದ್ದಾರೆ. ಈ ವೇಳೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಕನ್ನಡದಲ್ಲೇ ಭಾಷಣ ಆರಂಭಿಸಿ, ತಾಯಿ ಚಾಮುಂಡೇಶ್ವರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ ಎಂದರು. ಹೆಚ್.ಡಿ.ದೇವೇಗೌಡರು ದೇಶದ ಅತ್ಯಂತ ಹಿರಿಯ ನಾಯಕರು, ಅವರ ಆಶೀರ್ವಾದ ಸಿಕ್ಕಿರುವುದು ಕೂಡ ಒಂದು ಸೌಭಾಗ್ಯವಾಗಿದೆ. ಮೈಸೂರು ಸೇರಿದಂತೆ ಇಡೀ ಕರ್ನಾಟಕದ ಆಶೀರ್ವಾದ ನಮಗೆ ಸಿಗಬೇಕು. ಈ ಲೋಕಸಭಾ ಚುನಾವಣೆ ಮುಂದಿನ 5 ವರ್ಷ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ