ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ
ಕಿಚ್ಚ ಸುದೀಪ್ ಅವರನ್ನು ಅನೇಕರು ಹತ್ತಿರದಿಂದ ನೋಡಿರುತ್ತಾರೆ. ಅವರೆಲ್ಲರಿಗೂ ಸುದೀಪ್ ಉತ್ತರ ಕೊಟ್ಟಿದ್ದಾರೆ. ಈಗ ಅವರನ್ನು ಹತ್ತಿರದಿಂದ ನೋಡಿದವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ತಮಿಳು ನಟ ನವೀನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಹತ್ತಿರದಿಂದ ನೋಡಿದಾಗ ಹೇಗೆ ಕಾಣುತ್ತಾರೆ ಎಂಬುದನ್ನು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ‘ಮಾರ್ಕ್’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾದಲ್ಲಿ ತಮಿಳು ನಟ ನವೀನ್ ಚಂದ್ರ ಅವರು ನಟಿಸಿದ್ದಾರೆ. ಅವರಿಗೆ ಸುದೀಪ್ ಅವರ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ನವೀನ್ ಚಂದ್ರ ಉತ್ತಮವಾಗಿ ಕನ್ನಡ ಮಾತನಾಡುತ್ತಾರೆ. ಇದು ಹೇಗೆ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ‘ನಾನು ಬಳ್ಳಾರಿ ಹುಡುಗ. ಕನ್ನಡದಲ್ಲೇ ನಾನು ಓದಿದ್ದು. ಆ ಬಳಿಕ ಒಂದು ಗ್ಯಾಪ್ ಆಯಿತು. ನಾನು ಕನ್ನಡದವರ ಜೊತೆ ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
