Daily Devotional: ನವರಾತ್ರಿ ಮೊದಲ ದಿನದ ಮಹತ್ವ ಹಾಗೂ ಶೈಲಪುತ್ರಿ ಯಾರು ತಿಳಿಯಿರಿ

Updated on: Sep 22, 2025 | 6:49 AM

ನವರಾತ್ರಿಯ ಮೊದಲ ದಿನವಾದ ಶುಕ್ಲಪಕ್ಷದ ಪಾಡ್ಯದಂದು ಶೈಲಪುತ್ರಿಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶೈಲಪುತ್ರಿ ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು, ರುಷಭ ವಾಹನದಲ್ಲಿ ಪ್ರಯಾಣಿಸುವುದು ಹಾಗೂ ತ್ರಿಶೂಲ ಮತ್ತು ಕಮಲವನ್ನು ಧರಿಸಿರುವುದು ವಿಶೇಷತೆ. ಈ ದಿನ ಘಟಸ್ಥಾಪನೆ, ಕಲಶಸ್ಥಾಪನೆ ಮತ್ತು ದೀಪಾರಾಧನೆ ಮಾಡುವುದು ವಾಡಿಕೆ.

ಬೆಂಗಳೂರು, ಸೆಪ್ಟೆಂಬರ್​​ 22: ನವರಾತ್ರಿಯ ಪ್ರಥಮ ದಿನವಾದ ಇಂದು ಶೈಲಪುತ್ರಿ ದೇವಿಯ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆಶ್ವೀಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿವರೆಗೆ ನಡೆಯುವ ಈ ನವರಾತ್ರಿಯಲ್ಲಿ ಪ್ರತಿ ದಿನವೂ ಒಂದೊಂದು ದೇವಿಯ ಪೂಜೆ ನಡೆಯುತ್ತದೆ. ಶೈಲಪುತ್ರಿಯು ಪರ್ವತರಾಜ ಹಿಮವಂತನ ಪುತ್ರಿಯಾಗಿದ್ದು, ತ್ರಿಶೂಲ ಮತ್ತು ಕಮಲವನ್ನು ಧರಿಸಿ ಋಷಭ ವಾಹನದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ದಿನ ಘಟಸ್ಥಾಪನೆ, ಕಲಶಸ್ಥಾಪನೆ ಮತ್ತು ದೀಪಾರಾಧನೆಗಳನ್ನು ಮಾಡುವುದು ವಾಡಿಕೆ.