ಬರೋಬ್ಬರಿ 4,352 ದಿನಗಳ ಬಳಿಕ ಇತಿಹಾಸ ನಿರ್ಮಿಸಿದ ನೇಪಾಳ

Updated on: Feb 18, 2026 | 10:42 AM

Nepal Team: 2014 ರಲ್ಲಿ ಗೆದ್ದು ಬರೋಬ್ಬರಿ 12 ವರ್ಷಗಳ ಬಳಿಕ, ಅಂದರೆ 4,352 ದಿನಗಳ ನಂತರ ನೇಪಾಳ ತಂಡವು ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಕಾಯುವಿಕೆಯ ಬಳಿಕ ಗೆಲುವು ದಾಖಲಿಸಿದ ತಂಡವೆಂಬ ದಾಖಲೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ.

ಬರೋಬ್ಬರಿ 4,352 ದಿನಗಳ ಬಳಿಕ ನೇಪಾಳ ತಂಡವು ಟಿ20 ವಿಶ್ವಕಪ್​ನಲ್ಲಿ ಪಂದ್ಯ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಮ್ಯಾಚ್ ಗೆದ್ದ ತಂಡವೆಂಬ ದಾಖಲೆಯೊಂದನ್ನು ನೇಪಾಳ ತನ್ನದಾಗಿಸಿಕೊಂಢಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 33ನೇ ಪಂದ್ಯದಲ್ಲಿ ನೇಪಾಳ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 170 ರನ್​ ಕಲೆಹಾಕಿತು.

ಈ ಗುರಿಯನ್ನು ನೇಪಾಳ ತಂಡ 19.3 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಇದು ನೇಪಾಳ ತಂಡದ ಮೂರನೇ ವಿಶ್ವಕಪ್ ಗೆಲುವು.

ಇದಕ್ಕೂ ಮುನ್ನ 2014 ರಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ನೇಪಾಳ ತಂಡವು 2 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ಮತ್ತೊಮ್ಮೆ ಜಯ ಸಾಧಿಸಲು ಬರೋಬ್ಬರಿ 4352 ದಿನಗಳನ್ನು ತೆಗೆದುಕೊಂಡಿದೆ.

ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಬಳಿಕ ಪಂದ್ಯ ಗೆದ್ದ ಹಿರಿಮೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಐರ್ಲೆಂಡ್ ತಂಡದ ಹೆಸರಿನಲ್ಲಿತ್ತು.

2014 ರಲ್ಲಿ ಪಂದ್ಯ ಗೆದ್ದಿದ್ದ ಐರ್ಲೆಂಡ್ ತಂಡವು ಮತ್ತೊಂದು ವಿಶ್ವಕಪ್ ಗೆಲುವು ದಾಖಲಿಸಲು 2021 ರವರೆಗೆ ಕಾದಿದ್ದರು. ಅಂದರೆ ಬರೋಬ್ಬರಿ 2770 ದಿನಗಳ ಬಳಿಕ ಟಿ20 ವಿಶ್ವಕಪ್​ನಲ್ಲಿ ಗೆಲುವಿನ ನಗೆ ಬೀರಿದ್ದರು.

ಇದೀಗ 2014 ರಲ್ಲಿ ಗೆದ್ದು ಬರೋಬ್ಬರಿ 12 ವರ್ಷಗಳ ಬಳಿಕ, ಅಂದರೆ 4,352 ದಿನಗಳ ನಂತರ ನೇಪಾಳ ತಂಡವು ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ದೀರ್ಘಾವಧಿಯ ಕಾಯುವಿಕೆಯ ಬಳಿಕ ಗೆಲುವು ದಾಖಲಿಸಿದ ತಂಡವೆಂಬ ದಾಖಲೆಯನ್ನು ನೇಪಾಳ ತನ್ನದಾಗಿಸಿಕೊಂಡಿದೆ.

 

Loading...
Unable to load recommendations.
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More