By bike not bullocks: ಹೊಸ ಸಾಧನ, ಸಾಹಸ : ಹತ್ತಿ ಹೊಲಕ್ಕೆ ಬೈಕ್ ಮೂಲಕ ಎಡೆ ಹೊಡೆದ ರೈತ

Edited By: ಸಾಧು ಶ್ರೀನಾಥ್​

Updated on: Aug 03, 2023 | 2:07 PM

Plough by Bike: ಬೈಕ್ ಹಿಂಬದಿಯಲ್ಲಿ ಸೈಕಲ್ ಅಳವಡಿಸಿ, ಹತ್ತಿ ಹೊಲದಲ್ಲಿ ಬೈಕ್ ಮೂಲಕ ಎಡೆ ಹೊಡೆದು ಸೈ ಎನಿಸಿಕೊಂಡ ರೈತ. ಎತ್ತುಗಳ ಸಹಾಯವಿಲ್ಲದೇ ಎಡೆ ಹೊಡೆದಿರುವುದು ವಿಶೇಷವಾಗಿದೆ.

ಧಾರವಾಡ: ಈ ಭಾಗದಲ್ಲಿ ಈ ಬಾರಿ ಮುಂಗಾರು ತುಸು ತಡವಾಗಿ ಬಂದಿತಾದರೂ ಇತ್ತೀಚೆಗೆ ಉತ್ತಮ ಮಳೆಯಾಗಿ ರೈತಾಪಿ ವರ್ಗದಲ್ಲಿ ನವೋತ್ಸಾಹ ಮೂಡಿಸಿದೆ. ನಾನಾ ಬವಣೆಗಳನ್ನು ಪಡುವ ರೈತ ತನ್ನ ಉಳುಮೆ ಮೂಲಕವೇ ಬದುಕು ಕಟ್ಟಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಿರುತ್ತಾನೆ. ಮಧ್ಯೆ ಮಧ್ಯೆ ಹೊಸ ಸಾಧನ, ಸಾಹಸಗಳನ್ನೂ ಹುಟ್ಟುಹಾಕುತ್ತಿರುತ್ತಾನೆ. ಇದೀಗ ಧಾರವಾಡ ಜಿಲ್ಲೆಯ ನವಲಗುಂದ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ (Navalgund taluk in Dharwad) ರೈತ ಬೈಕ್ ಮೂಲಕ ವಿಶೇಷವಾಗಿ ಎಡೆ ಹೊಡೆದಿದ್ದಾನೆ (Plough). ಕಲ್ಮೇಶ್ ತಲವಾಯಿ ಅನ್ನೋ ರೈತನಿಂದ (farmer) ಈ ಸಾಹಸದ ಕೆಲಸ ನಡೆದಿದೆ. ತನ್ನ ವಿಶಾಲವಾದ ಹತ್ತಿ ಹೊಲಕ್ಕೆ ರೈತ ಕಲ್ಮೇಶ್ ಬೈಕ್ ಹಿಂಬದಿಯಲ್ಲಿ ಸೈಕಲ್ ಅಳವಡಿಸಿ, ತಾನೇ ನಿರ್ಮಿಸಿರೋ ಹೊಸ ಸಾಧನದಿಂದ ಈ ಸಾಹಸ ಮಾಡಿದ್ದಾನೆ. ಎತ್ತುಗಳ ಸಹಾಯವಿಲ್ಲದೇ ಎಡೆ ಹೊಡೆದಿರುವುದು ವಿಶೇಷವಾಗಿದೆ (Plough by Bike but not bullocks).

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More