Video: ಮಹಾರಾಷ್ಟ್ರ: ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?

Updated on: Jul 11, 2025 | 8:14 AM

ಮಹಾರಾಷ್ಟ್ರದಲ್ಲಿ ಸೇತುವೆಯೊಂದು ಲೋಕಾರ್ಪಣೆಯಾಗಿ ಕೇವಲ ಎರಡು ಗಂಟೆಗಳಲ್ಲೇ ಮುಚ್ಚಲಾಗಿತ್ತು. ಕಲ್ಯಾಣ್​-ಶಿಲ್ ರಸ್ತೆಯಲ್ಲಿರುವ ಪಲವಾ ಸೇತುವೆಯನ್ನು ಜುಲೈ 4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಉದ್ಘಾಟನೆಗೊಂಡು ಕೇವಲ 2 ಗಂಟೆಗಳ ಅವಧಿಯಲ್ಲಿ ಮುಚ್ಚುವ ಅನಿವಾರ್ಯತೆ ಎದುರಾಯಿತು. ಸೇತುವೆ ಮೇಲೆ ಮೂರ್ನಾಲ್ಕು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಬಳಿಕ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸೇತುವೆಯಲ್ಲಿ ತುಂಬಾ ಜಾರಿಕೆ ಇದ್ದ ಕಾರಣ ವಾಹನಗಳು ಸ್ಕಿಡ್​ ಆಗಿ ಅಪಾಯ ಉಂಟಾಗುತ್ತಿತ್ತು.

ಮಹಾರಾಷ್ಟ್ರ, ಜುಲೈ 11: ಮಹಾರಾಷ್ಟ್ರದಲ್ಲಿ ಸೇತುವೆಯೊಂದು ಲೋಕಾರ್ಪಣೆಯಾಗಿ ಕೇವಲ ಎರಡು ಗಂಟೆಗಳಲ್ಲೇ ಮುಚ್ಚಲಾಗಿತ್ತು. ಕಲ್ಯಾಣ್​-ಶಿಲ್ ರಸ್ತೆಯಲ್ಲಿರುವ ಪಲವಾ ಸೇತುವೆಯನ್ನು ಜುಲೈ 4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಉದ್ಘಾಟನೆಗೊಂಡು ಕೇವಲ 2 ಗಂಟೆಗಳ ಅವಧಿಯಲ್ಲಿ ಮುಚ್ಚುವ ಅನಿವಾರ್ಯತೆ ಎದುರಾಯಿತು. ಸೇತುವೆ ಮೇಲೆ ಮೂರ್ನಾಲ್ಕು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಬಳಿಕ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸೇತುವೆಯಲ್ಲಿ ತುಂಬಾ ಜಾರಿಕೆ ಇದ್ದ ಕಾರಣ ವಾಹನಗಳು ಸ್ಕಿಡ್​ ಆಗಿ ಅಪಾಯ ಉಂಟಾಗುತ್ತಿತ್ತು. ಹೀಗಾಗಿ ಮುಚ್ಚಲಾಗಿತ್ತು. ಆದರೆ ನಂತರ ಜಲ್ಲಿಕಲ್ಲುಗಳನ್ನು ಹಾಕಿ ಮತ್ತೆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More