ಮೊದಲ ಬಾರಿಗೆ ಮಗಳ ಪರಿಚಯಿಸಿದ ನೀನಾಸಂ ಸತೀಶ್

Updated on: Feb 19, 2026 | 10:37 AM

ನೀನಾಸಂ ಸತೀಶ್ ಅವರು ಮಗಳ ಜೊತೆ ಹೆಚ್ಚು ಕಾರ್ಯಕ್ರಮ ಅಟೆಂಡ್ ಮಾಡಿಲ್ಲ. ಈಗ ಅವರು ಮೊದಲ ಬಾರಿಗೆ ಮಗಳ ಪರಿಚಯಿಸಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಅವರು ಮಗಳನ್ನು ‘ದಿ ರೈಸ್ ಆಫ್ ಅಶೋಕ’ ಟ್ರೇಲರ್ ಲಾಂಚ್ ಈವೆಂಟ್​​ಗೆ ಕರೆ ತಂದಿದ್ದರು.

ನೀನಾಸಂ ಸತೀಶ್ ಅವರ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ರವಿಚಂದ್ರನ್, ದುನಿಯಾ ವಿಜಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆ ಮೇಲೆ ಮತ್ತೋರ್ವ ವಿಶೇಷ ವ್ಯಕ್ತಿ ಗಮನ ಸೆಳೆಯುತ್ತಿದ್ದರು. ಅವರೇ ನೀನಾಸಂ ಸತೀಶ್ ಅವರ ಮಗಳು. ಇಷ್ಟು ದಿನ ಸತೀಶ್ ಅವರು ವೇದಿಕೆ ಮೇಲೆ ಮಗಳನ್ನು ಪರಿಚಯ ಮಾಡಿಸಿಲ್ಲ. ಈಗ ಅವರು ಮಗಳನ್ನು ವೇದಿಕೆ ಮೇಲೆ ಕರೆದರು. ಆ ಸಂದರ್ಭದಲ್ಲಿ ಮಗಳು ಭಾವುಕಳಾದಳು. ಅಪ್ಪನಿಗೆ ಆಲ್ ದಿ ಬೆಸ್ಟ್ ಅನ್ನುತ್ತಾ ಅತ್ತು ಬಿಟ್ಟಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More