ನನಗೆ ಅಪಮಾನ ಮಾಡಿದ ಅಧಿಕಾರಿ ರಾಜೇಂದ್ರ ಕಠಾರಿಯ ವಿರುದ್ಧ ಸರ್ಕಾರ ಕ್ರಮ ಜರುಗಿಸಲೇ ಇಲ್ಲ: ರಾಜು ಕಾಗೆ

ಅರುಣ್​ ಕುಮಾರ್​ ಬೆಳ್ಳಿ

Updated on: Jun 24, 2025 | 1:19 PM

ಎಲ್ಲ ಅಧಿಕಾರಿಗಳು ದುರಹಂಕಾರಿಗಳು, ಭ್ರಷ್ಟರು ಅಂತ ಹೇಳಲು ತನಗೆ ಹುಚ್ಚುನಾಯಿಯೇನೂ ಕಚ್ಚಿಲ್ಲ, ಆದರೆ ಕೆಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಮನಸ್ಸಿಗೆ ನೋವಾಗುತ್ತದೆ, ಸರ್ಕಾರಕ್ಕೆ ಯಾವ ಇಲಾಖೆಯ ಮೇಲೂ ನಿಯಂತ್ರಣ ಇಲ್ಲ ಎಂದು ಹೇಳುವ ರಾಜು ಕಾಗೆ, ತಮ್ಮ ಶಾಲೆಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದರೂ ಅನುಮತಿಗಾಗಿ 2-3 ವರ್ಷಗಳಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ.

ಬೆಂಗಳೂರು, ಜೂನ್ 24: ನಿನ್ನೆ ತಮ್ಮ ಕ್ಷೇತ್ರದಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಕಟವಾಗಿ ಟೀಕಿಸಿದ್ದ ಕಾಂಗ್ರೆಸ್ ಶಾಸಕ ರಾಜು ಕಾಗೆ ಇವತ್ತು ಬೆಂಗಳೂರಲ್ಲಿ ಅದನ್ನು ಮುಂದುವರಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಧಿಕಾರಿಗಳು ಬೇಕು, ಪಕ್ಷದ ಶಾಸಕರು ಬೇಕಿಲ್ಲ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯ (Rajendra Katharia) ಎನ್ನುವವನು ನನಗೆ ಅವಮಾನ ಮಾಡಿದ ಮತ್ತು ಸದನದಲ್ಲೂ ಆ ವಿಷಯದ ಪ್ರಸ್ತಾಪ ಆಯಿತು, 60 ಜನ ಶಾಸಕರು ಅವನನ್ನು ಬೇರೆ ಕಡೆ ಟ್ರಾನ್ಸ್​ಫರ್ ಮಾಡಬೇಕು ಸರ್ಕಾರಕ್ಕೆ ಮನವಿ ಮಾಡಿದರು, ಮುಖ್ಯಮಂತ್ರಿ ಬೆಳಗಾವಿಗೆ ಬಂದಾಗ ನಾನೂ ಎರಡು ಮೂರು ಸಲ ಕಠಾರಿಯ ಬಗ್ಗೆ ಹೇಳಿದೆ, ಆದರೆ ಆಗಿದ್ದೇನು? ಅವನು ಈಗಲೂ ತನ್ನ ಸ್ಥಾನದಲ್ಲಿ ಮುಂದುವರಿದಿದ್ದಾನೆ ಎಂದು ರಾಜು ಕಾಗೆ ಹೇಳಿದರು.

ಇದನ್ನೂ ಓದಿ:  ಪಾಟೀಲ್, ರಾಜು ಕಾಗೆ ಬೆನ್ನಲ್ಲೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.