ಪ್ರಥಮ್ ಪ್ರಕಾರ ಬಿಗ್​ಬಾಸ್ 10ರ ಅತ್ಯುತ್ತಮ ಐದು ಸ್ಪರ್ಧಿಗಳು ಇವರೇ

Updated on: Oct 14, 2023 | 9:01 PM

Bigg Boss 10: ಬಿಗ್​ಬಾಸ್ ಮನೆಗೆ ಅತಿಥಿಯಾಗಿ ಅಷ್ಟೆ ಹೋಗಿದ್ದ ಪ್ರಥಮ್ ಈ ಸೀಸನ್​ನ ಸ್ಪರ್ಧಿಗಳನ್ನೆಲ್ಲ ಹತ್ತಿರದಿಂದ ನೋಡಿದ್ದಾರೆ. ಹೊರಗೆ ಬಂದು ಈ ಸೀಸನ್​ನ ಟಾಪ್ ಐದು ಕಂಟೆಸ್ಟ್ ಯಾರಾಗಲಿದ್ದಾರೆಂಬ ಪಟ್ಟಿ ನೀಡಿದ್ದಾರೆ.

ಈ ಹಿಂದೆ ಬಿಗ್​ಬಾಸ್ (Bigg Boss) ಮನೆಗೆ ಹೋಗಿ ಅದ್ಭುತವಾಗಿ ಆಡಿ ವಿಜೇತರಾಗಿರುವ ಪ್ರಥಮ್, ಕೆಲವು ದಿನಗಳ ಹಿಂದೆ ಮತ್ತೊಮ್ಮೆ ಬಿಗ್​ಬಾಸ್ ಮನೆಗೆ ಹೋಗಿದ್ದರು. ಬಿಗ್​ಬಾಸ್ ಸೀಸನ್ 10ರ ಮನೆಗೆ ಲಾರ್ಡ್ ಪ್ರಥಮ್ ಆಗಿ ಎಂಟ್ರಿ ನೀಡಿದ್ದರು. ಮನೆಯಲ್ಲಿ ಹಲವು ಗಂಟೆಗಳ ಕಾಲ ಇದ್ದು ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಟಾಸ್ಕ್ ಮಾಡಿಸಿದರು. ನೋಡುಗರಿಂದ ಮನರಂಜನೆ ನೀಡಿದರು. ಮನೆಗೆ ಅತಿಥಿಯಾಗಿ ಅಷ್ಟೆ ಹೋಗಿದ್ದ ಪ್ರಥಮ್ ಕೆಲವೇ ಗಂಟೆಗಳಲ್ಲಿ ಮನೆಯಿಂದ ಹೊರಗೆ ಬಂದರು. ಸ್ಪರ್ಧಿಗಳನ್ನೆಲ್ಲ ಹತ್ತಿರದಿಂದ ನೋಡಿದ ಪ್ರಥಮ್, ಹೊರಗೆ ಬಂದು ಈ ಸೀಸನ್​ನ ಟಾಪ್ ಐದು ಕಂಟೆಸ್ಟ್ ಯಾರಾಗಲಿದ್ದಾರೆಂದು ಊಹಿಸಿ ಪಟ್ಟಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us