ಒನಕೆ ಓಬವ್ವ ಜಯಂತಿಗೆ ತಹಶೀಲ್ದಾರ್ ಗೈರು: ಶಿಡ್ಲಘಟ್ಟದಲ್ಲಿ ಭುಗಿಲೆದ್ದ ಆಕ್ರೋಶ
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಒನಕೆ ಓಬವ್ವ ಜಯಂತಿ ವಿವಾದಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಗಗನಸಿಂಧು ಅವರು ಜಯಂತಿಯಲ್ಲಿ ಭಾಗಿಯಾಗಲಿಲ್ಲ ಮತ್ತು ಪೂರ್ವಭಾವಿ ಸಭೆ ನಡೆಸಲಿಲ್ಲ ಎಂದು ಚಲವಾದಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವರ ವರ್ಗಾವಣೆಗೆ ಒತ್ತಾಯಿಸಲಾಯಿತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳನ್ನು ಕೂಡ ಮಾಡಲಾಗಿದೆ.
ಚಿಕ್ಕಬಳ್ಳಾಪುರ, ನ.14: ಮಹಿಳಾ ಶಕ್ತಿಯ ಸಂಕೇತವಾಗಿರುವ ಒನಕೆ ಓಬವ್ವ ಜಯಂತಿ ಆಚರಣೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ವಿವಾದಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಗಗನಸಿಂಧು ಅವರು ಜಯಂತಿಯಲ್ಲಿ ಭಾಗವಹಿಸದೆ, ಪೂರ್ವಭಾವಿ ಸಭೆ ನಡೆಸದ ಕಾರಣ ಚಲವಾದಿ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಗನಸಿಂಧು ಅವರು ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ, ಅವರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. “ಶಿಡ್ಲಘಟ್ಟ ಬಚಾವೋ, ಗಗನ್ ಸಿಂಧು ಹಠಾವೋ” ಎಂದು ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಉದ್ವಿಗ್ನಗೊಂಡಾಗ, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಅವರು ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಅವರ ಮನವಿಯ ಮೇರೆಗೆ ಚಲವಾದಿ ಸಮುದಾಯದವರು ಜಯಂತಿಯಲ್ಲಿ ಭಾಗವಹಿಸಿ, ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಆಚರಣೆಯನ್ನು ಪೂರ್ಣಗೊಳಿಸಿದರು. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ ಗಗನಸಿಂಧು, ಡಿಸಿ ಅವರೊಂದಿಗೆ ಆರ್‌ಟಿಐ ಪ್ರಕರಣಗಳ ವಿಚಾರಣೆ ಇದ್ದುದರಿಂದ ತಾನು ಜಯಂತಿಯಲ್ಲಿ ಭಾಗಿಯಾಗಲಿಲ್ಲ. ಮಂಜುನಾಥ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಯಾವುದೇ ಸಮುದಾಯವನ್ನು ನಿರ್ಲಕ್ಷಿಸುವ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
