ಸ್ಪೇನ್‌ನ ರೈಲು ದುರಂತದ ಸಾವಿನ ಸಂಖ್ಯೆ 68ಕ್ಕೆ ಏರಿಕೆ

Updated on: Oct 28, 2026 | 9:08 PM

ಸ್ಪೇನ್‌ನ ಟೊಲೆಡೊ ನಗರದ ಬಳಿ ಸಂಭವಿಸಿದ ಭೀಕರ ಹೈಸ್ಪೀಡ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 68ಕ್ಕೆ ಏರಿಕೆಯಾಗಿದೆ. ದುರಂತದ ಬೆನ್ನಲ್ಲೇ ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ದೇಶವನ್ನುದ್ದೇಶಿಸಿ ಮಾತನಾಡಿದ್ದು, "ಈ ಕ್ಷಣದಲ್ಲಿ ಇಡೀ ದೇಶವೇ ತೀವ್ರ ಶೋಕದಲ್ಲಿದೆ ಹಾಗೂ ಸಂತ್ರಸ್ತರ ಕುಟುಂಬಗಳ ಜೊತೆ ನಿಂತಿದೆ" ಎಂದು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಬಿರುಸಿನಿಂದ ಸಾಗುತ್ತಿದ್ದು, ನಜ್ಜುಗುಜ್ಜಾಗಿರುವ ಬೋಗಿಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲಾಗುತ್ತಿದೆ.

ಟೊಲೆಡೊ, ಅಕ್ಟೋಬರ್ 28: ಸ್ಪೇನ್‌ನ ಟೊಲೆಡೊ ನಗರದ ಬಳಿ ಸಂಭವಿಸಿದ ಭೀಕರ ಹೈಸ್ಪೀಡ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ದುರಂತದ ಬೆನ್ನಲ್ಲೇ ಸ್ಪೇನ್ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್ ದೇಶವನ್ನುದ್ದೇಶಿಸಿ ಮಾತನಾಡಿದ್ದು, “ಈ ಕ್ಷಣದಲ್ಲಿ ಇಡೀ ದೇಶವೇ ತೀವ್ರ ಶೋಕದಲ್ಲಿದೆ ಹಾಗೂ ಸಂತ್ರಸ್ತರ ಕುಟುಂಬಗಳ ಜೊತೆ ನಿಂತಿದೆ” ಎಂದು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಬಿರುಸಿನಿಂದ ಸಾಗುತ್ತಿದ್ದು, ನಜ್ಜುಗುಜ್ಜಾಗಿರುವ ಬೋಗಿಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲಾಗುತ್ತಿದೆ.

ಆರಂಭದಲ್ಲಿ 46 ಎಂದು ಅಂದಾಜಿಸಲಾಗಿದ್ದ ಸಾವಿನ ಸಂಖ್ಯೆ, ಬೋಗಿಗಳ ಅವಶೇಷ ತೆರವುಗೊಳಿಸಿದಂತೆ 68ಕ್ಕೆ ಏರಿಕೆಯಾಗಿದೆ. ನೂರಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲು ಸಂಚಾರ ಸ್ಥಗಿತಗೊಂಡಿರುವ ಪ್ರಮುಖ ಹೈಸ್ಪೀಡ್ ಮಾರ್ಗದಲ್ಲಿ ತಾಂತ್ರಿಕ ದೋಷ ಅಥವಾ ಸಿಗ್ನಲಿಂಗ್ ಲೋಪ ಸಂಭವಿಸಿದೆಯೇ ಎಂಬುದರ ಕುರಿತು ಸ್ಪೇನ್‌ನ ಸಾರಿಗೆ ಸಚಿವಾಲಯ ಹಾಗೂ ರೈಲು ಮಂಡಳಿ ಉನ್ನತ ಮಟ್ಟದ ತನಿಖೆಯನ್ನು ಚುರುಕುಗೊಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More