Rains in Raichur: ಧಾರಾಕಾರ ಮಳೆಗೆ ರಾಯಚೂರು ಎಪಿಎಮ್​ಸಿ ಯಾರ್ಡ್​ನಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತದ ಮೂಟೆಗಳು ತೊಯ್ದು ಹಾಳು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 01, 2023 | 10:31 AM

ಮಳೆಯ ನೀರು ಎಪಿಎಮ್ ಸಿ ಯಾರ್ಡ್ ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ, ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.

ರಾಯಚೂರು: ಮಾನ್ಸೂನ್ (Monsoon) ರಾಜ್ಯ ಪ್ರವೇಶಿಸಲು ಇನ್ನೂ ಒಂದು ವಾರಕ್ಕೂ ಹೆಚ್ಚು ಸಮಯ ಇರುವುದರಿಂದ ರಾಯಚೂರ ನಗರದಲ್ಲಿ (Raichur city)  ನಿನ್ನೆ ಧಾರಾಕಾರವಾಗಿ ಸುರಿದಿದ್ದು ಅಕಾಲಿಕ ಮಳೆಯೇ. ರಾಯಚೂರು ನಗರ ಭಾಗದಲ್ಲಿ ಮಳೆ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದ್ದರಿಂದ ಜನರಿಗೆ ಬಚಾವಾಗಲು ಸಮಯ ಕೂಡ ಸಿಕ್ಕಿಲ್ಲ. ಇಲ್ಲಿನ ವ್ಯವಸಾಯ ಉತ್ಪನ್ನ ಮಾರಾಟ ಮಳಿಗೆಯಲ್ಲಿ (APMC yard) ಸುತ್ತಮುತ್ತಲಿನ ಗ್ರಾಮಗಳ ಜನರು ಭತ್ತದ (ನೆಲ್ಲು) ಮೂಟೆಗಳನ್ನು ಮಾರಲು ತಂದಿಟ್ಟಿದ್ದಾರೆ. ಆದರೆ ಮಳೆಯ ನೀರು ಎಪಿಎಮ್ ಸಿ ಯಾರ್ಡ್ ಗೆ ನುಗ್ಗಿ ಭತ್ತದ ಚೀಲಗಳನ್ನು ತೊಯಿಸಿಬಿಟ್ಟಿದೆ. ನಷ್ಟ ಅನುಭವಿಸಿರುವ ರೈತರು ಕಂಗಾಲಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.