ಮನೆ ಮಗುವಿನಂತೆ ಸಾಕಿದ ನಾಯಿ ಹೃದಯಘಾತದಿಂದ ಸತ್ತಾಗ ಕಲಬುರಗಿಯ ಕುಟುಂಬ ದುಃಖಿಸಿದ್ದು ಅಷ್ಟಿಷ್ಟಲ್ಲ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Oct 15, 2022 | 10:53 AM

6 ವರ್ಷಗಳ ಕಾಲ ಕುಲಕರ್ಣಿ ಕುಟುಂಬದ ಅವಿಭಾಜ್ಯ ಅಂಗವಾಗಿದ್ದ ಕ್ಯಾಂಡಿ ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದೆ. ಕುಟುಂಬಸ್ಥರು ವಿಧಿವಿಧಾನಗಳೊಂದಿಗೆ ಅದರ ಅಂತ್ಯಕ್ರಿಯೆ ನೆರವೇರಿಸಿದರು.

ಕಲಬುರಗಿ:  ಸಾಕು ನಾಯಿಗಳ ಮೇಲೆ ನಮಗೆ ಅಪಾರ ಪ್ರೀತಿ. ನಾಯಿ ಯಾವುದೇ ತಳಿಯದ್ದಾಗಿರಲಿ (breed) ಅದರೊಂದಿಗೆ ಅವಿನಾಭಾವ ಬಾಂಧವ್ಯ ಬೆಳೆದುಬಿಡುತ್ತದೆ. ಕಲಬುರಗಿಯ (Kalaburagi) ರಾಘವೇಂದ್ರ ಕಾಲೋನಿಯಲ್ಲಿರುವ ಮೋಹನ ಕುಲಕರ್ಣಿಯವರ (Mohan Kulkarni) ಕುಟುಂಬವೂ ಒಂದು ಹೆಣ್ಣು ನಾಯಿಯನ್ನು ಸಾಕಿ ಅದಕ್ಕೆ ಕ್ಯಾಂಡಿ (Candy) ಅಂತ ಹೆಸರಿಟ್ಟು ಮನೆಯ ಒಬ್ಬ ಸದಸ್ಯನಂತೆ ಬೆಳೆಸಿದ್ದರು. 6 ವರ್ಷಗಳ ಕಾಲ ಕುಲಕರ್ಣಿ ಕುಟುಂಬದ ಅವಿಭಾಜ್ಯ ಅಂಗವಾಗಿದ್ದ ಕ್ಯಾಂಡಿ ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದೆ. ಕುಟುಂಬಸ್ಥರು ವಿಧಿವಿಧಾನಗಳೊಂದಿಗೆ ಅದರ ಅಂತ್ಯಕ್ರಿಯೆ ನೆರವೇರಿಸಿದರು.

Loading...
Unable to load recommendations.
Follow Us
TV9 Web

TV9 Kannada

Read More