ICC ODI World Cup 2023: ಸ್ವಾಗತಿಸಲು ಒಬ್ಬರೂ ಇಲ್ಲ: ಪ್ಯಾಟ್ ಕಮ್ಮಿನ್ಸ್​ರನ್ನು ಆಸ್ಟ್ರೇಲಿಯಾ ಹೇಗೆ ನಡೆಸಿಕೊಂಡಿತು ನೋಡಿ

Updated on: Nov 23, 2023 | 8:15 AM

Pat Cummins Reached Australia: ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಗೆದ್ದ ನಂತರ ತನ್ನ ದೇಶಕ್ಕೆ ಹಿಂದಿರುಗಿದಾಗ, ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ. ಅಲ್ಲಿ ಕೆಲವೇ ಜನರು ನಿಂತಿದ್ದರು ಮತ್ತು ಕೆಲ ಕ್ರಿಕೆಟ್ ಪತ್ರಕರ್ತರು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ವಿಶ್ವ ಚಾಂಪಿಯನ್ ನಾಯಕನಿಗೆ ಈ ರೀತಿಯ ಸ್ವಾಗತ ನಿಜವಾಗಿಯೂ ಆಶ್ಚರ್ಯಕರವಾಗಿದೆ.

ಪ್ಯಾಟ್ ಕಮ್ಮಿನ್ಸ್… (Pat Cummins) ಈ ಹೆಸರು ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಪ್ರಸಿದ್ಧವಾಗಿದೆ. ಈ ಆಟಗಾರನ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ 2023 ರ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿತು. ಆಸೀಸ್​ನ ಈ ಐತಿಹಾಸಿಕ ಗೆಲುವಿನಲ್ಲಿ ಕಮ್ಮಿನ್ಸ್ ಕೂಡ ದೊಡ್ಡ ಕೊಡುಗೆ ನೀಡಿದ್ದಾರೆ. ಆದಾಗ್ಯೂ, ವಿಶ್ವಕಪ್ ಗೆದ್ದ ನಂತರ, ತಮ್ಮ ದೇಶಕ್ಕೆ ಹಿಂತಿರುಗಿದ ಪ್ಯಾಟ್ ಕಮ್ಮಿನ್ಸ್‌ಗೆ ಸರಿಯಾದ ಸ್ವಾಗತ ಸಿಗಲಿಲ್ಲ ಎಂಬಂತೆ ಗೋಚರಿಸುತ್ತಿದೆ. ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಗೆದ್ದ ನಂತರ ತನ್ನ ದೇಶಕ್ಕೆ ಹಿಂದಿರುಗಿದಾಗ, ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ. ಅಲ್ಲಿ ಕೆಲವೇ ಜನರು ನಿಂತಿದ್ದರು ಮತ್ತು ಕೆಲ ಕ್ರಿಕೆಟ್ ಪತ್ರಕರ್ತರು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ವಿಶ್ವ ಚಾಂಪಿಯನ್ ನಾಯಕನಿಗೆ ಈ ರೀತಿಯ ಸ್ವಾಗತ ನಿಜವಾಗಿಯೂ ಆಶ್ಚರ್ಯಕರವಾಗಿದೆ. ಏಕೆಂದರೆ ಭಾರತ ತಂಡವು ಈ ವಿಶ್ವಕಪ್ ಗೆದ್ದಿದ್ದರೆ, ಟೀಮ್ ಇಂಡಿಯಾ ಆಟಗಾರರು ಮತ್ತು ನಾಯಕ ರೋಹಿತ್ ಶರ್ಮಾ ಅವರಿಗೆ ಇಲ್ಲಿ ದೊಡ್ಡ ಗೌರವವೇ ಸಿಗುತ್ತಿತ್ತು. ಸದ್ಯ ಕಮ್ಮಿನ್ಸ್ ಆಸ್ಟ್ರೇಲಿಯಾದ ಏರ್ಪೋರ್ಟ್​ಗೆ ಆಗಮನಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More