ದುರಂಹಕಾರದಿಂದ ವಿಶ್ವಕಪ್ ಮೇಲೆ ಕಾಲಿಟ್ಟು ಕೂತ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ನೆಟ್ಟಿಗರಿಂದ ಉಗಿಸಿಕೊಂಡ!

ಇವನು ಕ್ರಿಕೆಟ್ ಕುಟುಂಬದಲ್ಲಿ ಬೆಳೆದವನು ಮಾರಾಯ್ರೇ. ಅಪ್ಪ ಜೆಫ್ ಮಾರ್ಷ್ 80 ರ ದಶಕದಲ್ಲಿ ಟೀಮ್ ಆಸ್ಟ್ರೇಲಿಯದ ಆರಂಭ ಆಟಗಾರರಾಗಿದ್ದರು. ಮಿಚೆಲ್ ಅಣ್ಣ ಶಾನ್ ಮಾರ್ಷ್ ಸಹ ಆಸ್ಟ್ರೇಲಿಯ ತಂಡ ಮತ್ತು 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೇರೆ ಬೇರೆ ತಂಡಗಳಿಗೆ ಆಡಿದ್ದರು.

ದುರಂಹಕಾರದಿಂದ ವಿಶ್ವಕಪ್ ಮೇಲೆ ಕಾಲಿಟ್ಟು ಕೂತ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ನೆಟ್ಟಿಗರಿಂದ ಉಗಿಸಿಕೊಂಡ!
|

Updated on:Nov 20, 2023 | 7:39 PM

ಅಹಮದಾಬಾದ್: ದುರಹಂಕಾರದ ಪರಾಮಾವಧಿ ಅಂದರೆ ಇದೇ ಇರಬೇಕು. ಚಿತ್ರದಲ್ಲಿ ಕಾಣುತ್ತಿರೋನು ನಿನ್ನೆ ಭಾರತವನ್ನು ಸಿಡಬ್ಲ್ಯೂಸಿ 2023 ಪೈನಲ್ ನಲ್ಲಿ (CWC 2023) ಅತಿಥೇಯ ಭಾರತವನ್ನು ಸೋಲಿಸಿ 6 ನೇ ಬಾರಿಗೆ ಚಾಂಪಿಯನ್ ಪಟ್ಟ ಧರಿಸಿದ ಆಸ್ಟ್ರೇಲಿಯ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh). ಅವನು ಕುಳಿತಿರುವ ಭಂಗಿಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಈ ಕಪ್ ಗೆಲ್ಲುವುದಕ್ಕೆ ಆಸ್ಟ್ರೇಲಿಯ, ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸಿದ ಉಳಿದ ರಾಷ್ಟ್ರೀಯ ತಂಡಗಳೆಲ್ಲ ಬೆವರು ಮತ್ತು ರಕ್ತ ಸುರಿಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಉದ್ಧಟ ಮತ್ತು ದುರಹಂಕಾರದ ಆಟಗಾರ ಕಪ್ ಮೇಲೆ ಕಾಲಿಟ್ಟು ಕೂತಿದ್ದಾನೆ! ಇವನು ಕ್ರಿಕೆಟ್ ಕುಟುಂಬದಲ್ಲಿ ಬೆಳೆದವನು ಮಾರಾಯ್ರೇ. ಅಪ್ಪ ಜೆಫ್ ಮಾರ್ಷ್ (Geoff Marsh) 80 ರ ದಶಕದಲ್ಲಿ ಟೀಮ್ ಆಸ್ಟ್ರೇಲಿಯದ ಆರಂಭ ಆಟಗಾರರಾಗಿದ್ದರು. ಮಿಚೆಲ್ ಅಣ್ಣ ಶಾನ್ ಮಾರ್ಷ್ (Shaun Marsh) ಸಹ ಆಸ್ಟ್ರೇಲಿಯ ತಂಡ ಮತ್ತು 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೇರೆ ಬೇರೆ ತಂಡಗಳಿಗೆ ಆಡಿದ್ದರು.

ಇವರಿಬ್ಬರು ಸದ್ಗೃಹಸ್ಥರಾಗಿದ್ದರೆ ಮಿಚೆಲ್ ಮಾತ್ರ ಹೀಗೆ ಅವಿವೇಕಿಯಂತೆ ವರ್ತಿಸಿದ್ದಾನೆ. ಅವನ ಕೈಯಲ್ಲಿ ಮದ್ಯ ತುಂಬಿದ ಗ್ಲಾಸ್ ಬೇರೆ ಇದೆ. ನಶೆಯಲ್ಲಿ ಹೀಗಾಡಿದನೆ? ಹಾಗಿದ್ದರೂ ಅದು ತಪ್ಪೇ. ಇವನ ಭಂಗಿಯನ್ನು ನೋಡಿದರೆ 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟರ್ ಮರ್ಲೋನ್ ಸ್ಯಾಮುಯೆಲ್ಸ್ ನೆನಪಾಗುತ್ತಾನೆ. ಅವನು ಪೈನಲ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ತನ್ನೆರಡೂ ಪಾದಗಳನ್ನು ಮಾಧ್ಯಮದವರು ಮೈಕ್ ಗಳನ್ನಿಟ್ಟಿದ್ದ ಟೇಬಲ್ ಮೇಲಿಟ್ಟು ಮಾತಾಡಿದ್ದ! ಬಿಡಿ ಎಲ್ಲ ಆಟಗಾರರು ಈ ವಿವೇಕಹೀನರಂತೆ ವರ್ತಿಸಲಾರರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 20 November 23

Follow us
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್