ವಿಶ್ವ ಕ್ರಿಕೆಟ್ಗೆ ಕೊಹ್ಲಿಯೇ ಸಾಮ್ರಾಟನೇ? ದಾಖಲೆಗಳಂತೂ ಅದನ್ನೇ ಹೇಳುತ್ತವೆ!
ಡಿಐ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಕೊಹ್ಲಿ ಈಗ ಮೂರನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ 18,426 ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ 14,234 ರನ್ ಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆ ಸಹ ಕೊಹ್ಲಿ ಉತ್ತಮಪಡಿಸಿದ್ದಾರೆ.
ಬೆಂಗಳೂರು: ವಿರಾಟ್ ಕೊಹ್ಲಿಯನ್ನು (Virat Kohli) ಯಾವುದೇ ನಾಮ ವಿಶೇಷಣದಿಂದ ಬಣ್ಣಿಸಿದರು ತೃಪ್ತಿಯೆನಿಸದು ಮಾರಾಯ್ರೇ. ಈಗಾಗಲೇ ಅವರು ವಿಶ್ವದ ಸರ್ವಕಾಲಿಕ (all-time great) ಬ್ಯಾಟರ್ ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಮುಂಬೈನಲ್ಲಿ ಇಂದು ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಪೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಒಡಿಐ ಕರೀಯರ್ ನ 50 ನೇ ಶತಕ ದಾಖಲಿಸಿ 49 ಶತಕಗಳ ದಾಖಲೆ ಹೊಂದಿದ್ದ ಸಚಿನ್ ತೆಂಡೂಲ್ಕೂರ್ ರನ್ನು (Sachin Tendulkar) ಹಿಮ್ಮೆಟ್ಟಿದ್ದರು. ವಾಂಖೇಡೆ ಸ್ಟೇಡಿಯಂ ನಲ್ಲಿ ಇವತ್ತು ಹಾಜರಿದ್ದ ಸಚಿನ್, ವಿರಾಟ್ ಶತಕವನ್ನು ಮನಸಾರೆ ಆನಂದಿಸಿದರಲ್ಲದೆ ದೀರ್ಘ ಕರತಾಡನದ ಮೂಲಕ ಕಿಂಗ್ ಕೊಹ್ಲಿಯನ್ನು ಅಭಿನಂದಿಸಿದರು. ವಿರಾಟ್ ಪತ್ನಿ ಅನುಷ್ಕಾ ಶರ್ಮ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಗಂಡನಿಗೆ ಫ್ಲೈಯಿಂಗ್ ಕಿಸ್ ರವಾನಿಸಿದ್ದೇ ರವಾನಿಸಿದ್ದು! ಒಡಿಐ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಕೊಹ್ಲಿ ಈಗ ಮೂರನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ 18,426 ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ 14,234 ರನ್ ಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆ ಸಹ ಕೊಹ್ಲಿ ಉತ್ತಮಪಡಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್ 2003 ರ ವಿಶ್ವಕಪ್ ನಲ್ಲಿ 673 ರನ್ ಗಳಿಸಿದ್ದರು. ವಿಶ್ವಕಪ್ 2023 ರಲ್ಲಿ ಕಿಂಗ್ ಕೊಹ್ಲಿ 674 ರನ್ ಗಳಿಸಿದ್ದಾರೆ.
The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.
— Sachin Tendulkar (@sachin_rt) November 15, 2023
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ