IND vs SA, ICC World Cup: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಎಷ್ಟು ಪಂದ್ಯ ಆಡಿದ್ದಾರೆ?: ಗೆದ್ದಿದ್ದೆಷ್ಟು?, ಸೋತಿದ್ದೆಷ್ಟು?

Virat Kohli Birthday: ವಿರಾಟ್ ಕೊಹ್ಲಿ ತಮ್ಮ ಜನ್ಮದಿನದಂದು ಪಂದ್ಯವನ್ನು ಆಡುತ್ತಿರುವುದು ಮೂರನೇ ಬಾರಿಗೆ. ಅರ್ಥಾತ್, ಇದಕ್ಕೂ ಮುನ್ನ ಅವರು ಹುಟ್ಟುಹಬ್ಬದಂದು ಎರಡು ಪಂದ್ಯಗಳನ್ನು ಆಡಿದ್ದಾರೆ. ಹಾಗಾದರೆ ಈ ಹಿಂದೆ ಆಡಿದ ಎರಡು ಪಂದ್ಯಗಳಲ್ಲಿ ಫಲಿತಾಂಶ ಯಾವ ರೀತಿ ಬಂದಿದೆ ನೋಡೋಣ.

IND vs SA, ICC World Cup: ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಎಷ್ಟು ಪಂದ್ಯ ಆಡಿದ್ದಾರೆ?: ಗೆದ್ದಿದ್ದೆಷ್ಟು?, ಸೋತಿದ್ದೆಷ್ಟು?
Virat Kohli and Rohit Sharma
Follow us
Vinay Bhat
|

Updated on: Nov 05, 2023 | 10:43 AM

ನವೆಂಬರ್ 5ನೇ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಬಹಳ ವಿಶೇಷವಾದ ದಿನ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ (Virat Kohli). ಇಂದು ವಿರಾಟ್ ಅವರ ಜನ್ಮದಿನ. ಮತ್ತೊಂದು ಸ್ಪೆಷನ್ ಎಂದರೆ ಇದೇ ದಿನ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 2023 ರ ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಬಾರಿಗೆ ಮುಖಾಮುಖಿ ಆಗುತ್ತಿದೆ. ಕೊಹ್ಲಿ ತಮ್ಮ ಜನ್ಮದಿನದಂದು ಪಂದ್ಯವನ್ನು ಆಡುತ್ತಿರುವುದು ಮೂರನೇ ಬಾರಿಗೆ. ಅರ್ಥಾತ್, ಇದಕ್ಕೂ ಮುನ್ನ ಅವರು ಹುಟ್ಟುಹಬ್ಬದಂದು ಎರಡು ಪಂದ್ಯಗಳನ್ನು ಆಡಿದ್ದಾರೆ. ಹಾಗಾದರೆ ಈ ಹಿಂದೆ ಆಡಿದ ಎರಡು ಪಂದ್ಯಗಳಲ್ಲಿ ಫಲಿತಾಂಶ ಯಾವ ರೀತಿ ಬಂದಿದೆ ನೋಡೋಣ.

ವಿರಾಟ್ ಕೊಹ್ಲಿ ತಮ್ಮ ಜನ್ಮದಿನದಂದು ಆಡಿದ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಅಂದರೆ, ಕೊಹ್ಲಿ ಅವರ ಹುಟ್ಟುಹಬ್ಬದಂದು ಆಡಿದ ಪಂದ್ಯದಲ್ಲಿ ಭಾರತ ಜಯ ಸಾಧಿಸಿದೆ. ಈ ದೃಷ್ಟಿಕೋನದಿಂದ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವು ಸಾಧಿಸಬಹುದು ಎಂದು ಅಭಿಮಾನಿಗಳು ನಂಬಿದ್ದಾರೆ. ಆದಾಗ್ಯೂ, ಇದು ಅಷ್ಟು ಸುಲಭವಲ್ಲ. ಏಕೆಂದರೆ ಪ್ರಸಕ್ತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಇಲ್ಲಿಯವರೆಗೆ ನೀಡಿದ ಪ್ರದರ್ಶನ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಿದೆ.

ಸಿಕ್ಸ್​ಗಳ ಸುರಿಮಳೆ: ಸ್ಪೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದ ಫಖರ್ ಝಮಾನ್

ಇದನ್ನೂ ಓದಿ
Image
ಈಡನ್ ಗಾರ್ಡನ್ಸ್​ನಲ್ಲಿ ಕೊಹ್ಲಿ ಬರ್ತ್ ಡೇ ಸೆಲೆಬ್ರೇಷನ್ ದಿಢೀರ್ ರದ್ದು
Image
35ನೇ ವರ್ಷಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ
Image
ವಿಶ್ವಕಪ್​ನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್ ಪಂದ್ಯ
Image
ಪಾಕ್ ವಿರುದ್ಧ ಕನ್ನಡಿಗನ ಪರಾಕ್ರಮ: ಹಳೆಯ ವಿಶ್ವ ದಾಖಲೆಗಳು ಧೂಳೀಪಟ

ವಿಶ್ವಕಪ್​ನಲ್ಲಿ ಇಂದು ಸೆಣಸಾಡುತ್ತಿರುವ ಪಾಯಿಂಟ್ಸ್ ಪಟ್ಟಿಯಲ್ಲಿರುವ ಎರಡು ಅಗ್ರ ತಂಡಗಳು. ಈ ಎರಡೂ ತಂಡ ಸೆಮಿ ಫೈನಲ್​ಗೂ ಲಗ್ಗೆಯಿಟ್ಟಿದೆ. ಹೀಗಾಗಿ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನ ಭಾರತ ಯಾವರೀತಿ ಪ್ರದರ್ಶನ ನೀಡುತ್ತೆ ಎಂಬುದು ನೋಡಬೇಕಿದೆ. ಸದ್ಯ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ಆಡಿದ ಆ ಎರಡು ಪಂದ್ಯಗಳು ಹೇಗಿತ್ತು ನೋಡೋಣ.

ವಿರಾಟ್ ಕೊಹ್ಲಿ Vs ದಕ್ಷಿಣ ಆಫ್ರಿಕಾ, 5 ನವೆಂಬರ್ 2015

ವಿರಾಟ್ ಕೊಹ್ಲಿ ತಮ್ಮ ಜನ್ಮದಿನದಂದು 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು. ಅದು ನವೆಂಬರ್ 5 ರಿಂದ ಮೊಹಾಲಿಯಲ್ಲಿ ಆರಂಭವಾದ ಟೆಸ್ಟ್ ಪಂದ್ಯ. ಆ ಪಂದ್ಯವನ್ನು ಭಾರತ 108 ರನ್‌ಗಳಿಂದ ಗೆದ್ದಿತ್ತು. ಆದರೆ, ಈ ಪಂದ್ಯದಲ್ಲಿ ವಿರಾಟ್ ಪ್ರದರ್ಶನ ಕಳಪೆ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 1 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 29 ರನ್ ಗಳಿಸಿದ್ದರು. ಈ ಪಂದ್ಯದ ವಿಶೇಷವೆಂದರೆ ನಾಯಕನಾಗಿ ವಿರಾಟ್ ಕೊಹ್ಲಿ ಭಾರತದ ನೆಲದಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು.

ವಿರಾಟ್ ಕೊಹ್ಲಿ Vs ಸ್ಕಾಟ್ಲೆಂಡ್, 5 ನವೆಂಬರ್ 2021

ವಿರಾಟ್ ಕೊಹ್ಲಿ ಜನ್ಮದಿನದಂದು ಭಾರತ 2021 ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಎರಡನೇ ಪಂದ್ಯವನ್ನು ಆಡಿತ್ತು. 20 ಓವರ್‌ಗಳಲ್ಲಿ 86 ರನ್‌ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಇಲ್ಲಿಯೂ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ವಿರಾಟ್ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದ ವಿಶೇಷವೆಂದರೆ ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ ಕೊನೆಯ ಸರಣಿಯಾಗಿದೆ.

ಈಗ ಮತ್ತೊಮ್ಮೆ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ಮತ್ತೊಂದು ಪಂದ್ಯವನ್ನು ಆಡಲಿದ್ದಾರೆ. ಈ ಪಂದ್ಯದ ಬಗ್ಗೆ ಎರಡು ವಿಶೇಷತೆಗಳಿವೆ. ಮೊದಲನೆಯದಾಗಿ, ವಿರಾಟ್ ತಮ್ಮ ಹುಟ್ಟುಹಬ್ಬದಂದು ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಎರಡನೆಯದಾಗಿ, ಈ ಬಾರಿ ವಿರಾಟ್ ಕೊಹ್ಲಿ ನಾಯಕನಾಗಿಲ್ಲ. ಅಂದರೆ ಮೊದಲ ಬಾರಿಗೆ ಆಟಗಾರನಾಗಿ ಅವರು ತಮ್ಮ ಹುಟ್ಟುಹಬ್ಬದಂದು ಪಂದ್ಯವನ್ನು ಆಡಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ