Virat Kohli Birthday: 35ನೇ ವರ್ಷಕ್ಕೆ ಕಾಲಿಟ್ಟ ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ

Happy Birthday Virat Kohli: ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಇಂದು ವಿಶ್ವಕಪ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಕೂಡ ನಡೆಯಲಿದ್ದು, ಈಡನ್ ಗಾರ್ಡನ್ಸ್​ನಲ್ಲಿ ಕೊಹ್ಲಿಯ ಬರ್ತ್ ಡೇ ಸೆಲೆಬ್ರೇಷನ್ ಜೋರಾಗಿ ಇರಲಿದೆ.

|

Updated on: Nov 05, 2023 | 7:20 AM

ಸಮಕಾಲೀನ ಕ್ರಿಕೆಟ್‌ ಜಗತ್ತಿನ ಅತ್ಯಂತ ಯಶಸ್ವಿ ಬ್ಯಾಟರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಸಾಕಷ್ಟು ವೈಫಲ್ಯಗಳನ್ನು ಎದುರಿಸಿ ಇಂದು ವಿಶ್ವದ ಶ್ರೇಷ್ಠ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿಗೆ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

1 / 7
ಇಂದು ವಿಶ್ವಕಪ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಪಂದ್ಯ ಕೂಡ ನಡೆಯಲಿದ್ದು, ಈಡನ್ ಗಾರ್ಡನ್ಸ್​ನಲ್ಲಿ ಕೊಹ್ಲಿಯ ಬರ್ತ್ ಡೇ ಸೆಲೆಬ್ರೇಷನ್ ಜೋರಾಗಿ ಇರಲಿದೆ. ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಇಂದು ವಿರಾಟ್ ಬ್ಯಾಟ್​ನಿಂದ ಶತಕ ಬಂದರೆ ಸಚಿನ್ ಶತಕಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ.

2 / 7
ನವೆಂಬರ್ 5, 1988 ರಂದು ನವದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಮತ್ತು ತಾಯಿ ಸರೋಜ್ ಕೊಹ್ಲಿ. ಕೊಹ್ಲಿ ಪ್ರಾರಂಭಿಕ ದಿನಗಳಲ್ಲಿ ಕೋಚಿಂಗ್ ರಾಜ್ಕುಮಾರ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು. 2008ರಲ್ಲಿ 19 ವರ್ಷದ ವಯೋಮಿತಿಯ ವಿಶ್ವಕಪ್​ನಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿಸಿದ ಕೊಹ್ಲಿ ನಂತರ ನೇರವಾಗಿ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ನೀಡಿದ್ದರು.

3 / 7
ತಮ್ಮ ಕವರ್ ಡ್ರೈವ್, ಕ್ಲಾಸಿಕ್‌ ಹೊಡೆತಗಳಿಗೆ ಹೆಸರುವಾಸಿಯಾದ ವಿರಾಟ್‌, ರನ್‌ ಗಳಿಕೆಗೆ ಸಿಕ್ಸರ್‌ಗಳಿಗಿಂತಲೂ ಫೋರ್‌ಗಳ ಮೇಲೆ ಹೆಚ್ಚು ವಿಶ್ವಾಸ ಇಡುವಂತಹ ಬ್ಯಾಟರ್. ಮುಖ್ಯವಾಗಿ ಇವರ ಕವರ್‌ ಡ್ರೈವ್‌ ಮತ್ತು ಫ್ಲಿಕ್‌ ಹೊಡೆತಗಳನ್ನು ನೋಡುವುದು ಕ್ರಿಕೆಟ್‌ ಪ್ರಿಯರ ಕಣ್ಣಿಗೆ ಹಬ್ಬವೇ ಸರಿ.

4 / 7
2013ನೇ ಇಸವಿಯಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ದೇಶದ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಮತ್ತು 2018ರಲ್ಲಿ ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಇದರ ಹೊರತಾಗಿ ಐಸಿಸಿ ವರ್ಷದ ಕ್ರಿಕೆಟಿಗ ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ.

5 / 7
2008ರಲ್ಲಿ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಲೇ 111 ಪಂದ್ಯಗಳಿಂದ 8,676 ರನ್‌ಗಳನ್ನು ಬಾರಿಸಿ 49.3ರ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಂಡಿದ್ದು, 13,525 ರನ್‌ಗಳನ್ನು ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ 4008 ರನ್ ಬಾರಿಸಿದ ಕೀರ್ತಿ ಕಿಂಗ್‌ ಕೊಹ್ಲಿ ಅವರದ್ದು.

6 / 7
ಐಪಿಎಲ್​ನಲ್ಲೂ ಮಿಂಚು ಹರಿಸಿರುವ ಕೊಹ್ಲಿ 2016ರ ಋತುವಿನಲ್ಲಿ ಬರೋಬ್ಬರಿ 973 ರನ್ ಗಳಿಸಿದ್ದರು. ಈ ದಾಖಲೆಯು ಈವರೆಗೆ ಹಾಗೆಯೇ ಉಳಿದಿದೆ ಎಂಬುದು ವಿಶೇಷ. ಹೀಗೆ ಅನೇಕ ದಾಖಲೆಗಳ ಸರದಾರ ಕಿಂಗ್ ಕೊಹ್ಲಿಗೆ ಟಿವಿ9 ಕನ್ನಡ ವೆಬ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.

7 / 7
Follow us
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು

ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು

ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್

ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?

ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ

ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..

ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ

ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ

ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?

ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ