- Kannada News Photo gallery Cricket photos IPL 2024 Lucknow Super Giants trade Romario Shepherd to Mumbai Indians
IPL 2024: ಹರಾಜಿಗೂ ಮುನ್ನ ಲಕ್ನೋ ತೊರೆದು ಮುಂಬೈ ಸೇರಿಕೊಂಡ ವಿಂಡೀಸ್ ಆಲ್‌ರೌಂಡರ್..!
IPL 2024: 2024 ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ ಧಾರಣೆ ಮಾಡಿಕೊಳ್ಳಲು ಐಪಿಎಲ್ ಮಂಡಳಿ ಅವಕಾಶ ನೀಡಿದೆ. ಅದರ ಫಲವಾಗಿ ಇದೀಗ ಲಕ್ನೋ ತಂಡದಿಂದ, ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಆಲ್‌ರೌಂಡರ್ನನ್ನು ಟ್ರೇಡಿಂಗ್ ಮೂಲಕ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.
Updated on: Nov 04, 2023 | 11:24 AM

2024 ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳಿಗೆ ಧಾರಣೆ ಮಾಡಿಕೊಳ್ಳಲು ಐಪಿಎಲ್ ಮಂಡಳಿ ಅವಕಾಶ ನೀಡಿದೆ. ಅದರ ಫಲವಾಗಿ ಇದೀಗ ಲಕ್ನೋ ತಂಡದಿಂದ, ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಆಲ್‌ರೌಂಡರ್ನನ್ನು ಟ್ರೇಡಿಂಗ್ ಮೂಲಕ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪರ ಆಡಿದ್ದರು. ಆದರೀಗ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಟ್ರೇಡಿಂಗ್ ಮೂಲಕ ಖರೀದಿಸಿದೆ.

ವೆಸ್ಟ್ ಇಂಡೀಸ್ನ ಈ ಬೌಲಿಂಗ್ ಆಲ್‌ರೌಂಡರ್ ಐಪಿಎಲ್ನಲ್ಲಿ ಇದುವರೆಗೆ ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. ಲಕ್ನೋ ತಂಡವನ್ನು ಸೇರುವ ಮೊದಲು 2022 ರಲ್ಲಿ, ಶೆಫರ್ಡ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಹೈದರಾಬಾದ್ ತಂಡವು 2022 ರ ಐಪಿಎಲ್ ಹರಾಜಿನಲ್ಲಿ ಈ ವೆಸ್ಟ್ ಇಂಡೀಸ್ ಆಲ್‌ರೌಂಡರ್ನನ್ನು 7.75 ಕೋಟಿ ರೂಪಾಯಿಗೆ ಖರೀದಿಸಿತ್ತು.

ಇದರ ನಂತರ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು ಐಪಿಎಲ್ 2023 ರ ಹರಾಜಿನಲ್ಲಿ 50 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಶೆಫರ್ಡ್ ಇಲ್ಲಿಯವರೆಗೆ ಒಟ್ಟು 4 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಬ್ಯಾಟಿಂಗ್ನಲ್ಲಿ 58 ರನ್ ಮತ್ತು ಬೌಲಿಂಗ್‌ನೊಂದಿಗೆ 3 ವಿಕೆಟ್ ಪಡೆದಿದ್ದಾರೆ.

ಇನ್ನುಳಿದಂತೆ 2024 ರ ಐಪಿಎಲ್ ಹರಾಜಿಗೂ ಮೊದಲು ತಂಡಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ, ತಂಡಗಳು ಹರಾಜಿಗೆ ಸುಮಾರು ಒಂದು ತಿಂಗಳ ಮೊದಲು ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಘೋಷಿಸಬೇಕಿದೆ.

ವರದಿಗಳ ಪ್ರಕಾರ, ನವೆಂಬರ್ 26 ರೊಳಗೆ ಐಪಿಎಲ್ ತಂಡಗಳು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಐಪಿಎಲ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ. 2024 ರ ಪಂದ್ಯಾವಳಿಯ ಹರಾಜು ಸುಮಾರು ಒಂದು ತಿಂಗಳ ನಂತರ ನಡೆಯುತ್ತದೆ.

ವರದಿಗಳನ್ನು ನಂಬುವುದಾದರೆ ಐಪಿಎಲ್ 2024 ರ ಹರಾಜು ದಿನಾಂಕವನ್ನು ಡಿಸೆಂಬರ್ 19 ರಂದು ನಿಗದಿಪಡಿಸಲಾಗಿದ್ದು, ಈ ಹರಾಜು ದುಬೈನಲ್ಲಿ ನಡೆಯಲ್ಲಿದೆ ಎಂದು ವರದಿಯಾಗಿದೆ.




