- Kannada News Photo gallery Cricket photos IPL 2024 players Mini-Auction to take place on December 19 in Dubai
IPL 2024: ದುಬೈನಲ್ಲಿ ನಡೆಯಲ್ಲಿದೆ 2024 ರ ಐಪಿಎಲ್ ಹರಾಜು; ಯಾವ ದಿನದಂದು ಗೊತ್ತಾ?
IPL 2024 Auction: 2024 ರ ಐಪಿಎಲ್ನ ಹರಾಜಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜನ್ನು ವಿದೇಶದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಇದೇ ನವೆಂಬರ್ 19 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
Updated on: Nov 04, 2023 | 8:15 AM

2024 ರ ಐಪಿಎಲ್ನ ಹರಾಜಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜನ್ನು ವಿದೇಶದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಸಿಕ್ಕಿರುವ ಮಾಹಿತಿ ಪ್ರಕಾರ ಇದೇ ನವೆಂಬರ್ 19 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಅಲ್ಲದೆ, ಫ್ರಾಂಚೈಸಿಗಳು ಆಟಗಾರರ ಧಾರಣ ಪಟ್ಟಿಯನ್ನು (ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ) ಪ್ರಕಟಿಸಲು ನವೆಂಬರ್ 26 ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ.

ಕಳೆದ ಆವೃತ್ತಿಯಲ್ಲಿ ಫ್ರಾಂಚೈಸಿಗಳ ಪರ್ಸ್ ಮೌಲ್ಯ ರೂ. 95 ಕೋಟಿ ಆಗಿತ್ತು ಆದರೆ ಈಗ ಐಪಿಎಲ್ ಆಡಳಿತ ಮಂಡಳಿ ಇದನ್ನು ರೂ.100 ಕೋಟಿಗೆ ಹೆಚ್ಚಿಸಲು ನಿರ್ಧರಿಸಿದೆ. ಅಲ್ಲದೆ ದುಬೈನಲ್ಲಿ ನಡೆಯಲ್ಲಿರುವ ಈ ಮಿನಿ ಹರಾಜು ಒಂದು ದಿನದಲ್ಲಿ ಕೊನೆಗೊಳ್ಳಲಿದೆ.

ಮುಂಬರುವ ಆವೃತ್ತಿಯೂ ಆಟಗಾರರಿಗೆ ಮೂರು ವರ್ಷಗಳ ಒಪ್ಪಂದದ ಮೂರನೇ ಮತ್ತು ಅಂತಿಮ ವರ್ಷವಾಗಿರುತ್ತದೆ. ಹೀಗಾಗಿ ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. ಬಿಸಿಸಿಐ ಕಳೆದ ವರ್ಷದ ಹರಾಜನ್ನು ಇಸ್ತಾನ್‌ಬುಲ್‌ನಲ್ಲಿ ನಡೆಸಲು ಪರಿಗಣಿಸಿತ್ತು. ಆದರೆ ಆ ಬಳಿಕ ಈ ಆಲೋಚನೆಯನ್ನು ಹಿಂಪಡೆದಿತ್ತು.

ದುಬೈನಲ್ಲಿ ಹರಾಜು ನಡೆಸುವುದರ ಬಗ್ಗೆ ಮಂಡಳಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದು, ಇದು ಈಗ 10 ತಂಡಗಳ ಐಪಿಎಲ್ ಹರಾಜಾಗಿದೆ. ಹೀಗಾಗಿ ಫ್ರಾಂಚೈಸಿಗಳ ಅನೇಕ ಸದಸ್ಯರು, ವಿವಿಧ ಬಿಸಿಸಿಐ ಅಧಿಕಾರಿಗಳು ಕಾರ್ಯಾಚರಣೆ ತಂಡ, ಪ್ರಸಾರ ಸಿಬ್ಬಂದಿ ಸದಸ್ಯರು ತಂಗಲು ಒಂದೇ ಪಂಚತಾರಾ ಹೋಟೆಲ್‌ನಲ್ಲಿ ನೂರಾರು ಕೊಠಡಿಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಅದಕ್ಕಾಗಿಯೇ ದುಬೈ ಆದ್ಯತೆಯ ತಾಣವಾಗಿದೆ ಎಂದಿದ್ದಾರೆ.

ಮುಂಬರುವ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸೇರಿದಂತೆ ಹಲವಾರು ಪ್ರಮುಖ ವಿದೇಶಿ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಎಂಟು ವರ್ಷಗಳ ನಂತರ ಐಪಿಎಲ್‌ಗೆ ಮರಳುವುದಾಗಿ ಅವರು ಇತ್ತೀಚೆಗೆ ಹೇಳಿದ್ದಾರೆ.

ಕಳೆದ ವರ್ಷ ಐಪಿಎಲ್‌ನಲ್ಲಿ ಆಡದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಹೆಸರನ್ನು ಬಿಡ್ಡಿಂಗ್‌ಗೆ ಮುಂದಿಡುವ ಸಾಧ್ಯತೆಯಿದೆ. ಇತರ ಪ್ರಮುಖ ಆಟಗಾರರೆಂದರೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಯೆಟ್ಜಿ, ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್, ಅಲೆಕ್ಸ್ ಹೇಲ್ಸ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್.



















