IND vs SA: ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಅಮೋಘ ಗೆಲುವು

TV9 Web
| Updated By: ಝಾಹಿರ್ ಯೂಸುಫ್

Updated on:Nov 05, 2023 | 8:53 PM

India vs South Africa, ICC world Cup 2023: ಏಕದಿನ ಕ್ರಿಕೆಟ್​ನಲ್ಲಿ ಸೌತ್ ಆಫ್ರಿಕಾ ಹಾಗೂ ಭಾರತ ತಂಡಗಳು ಇದುವರೆಗೆ 91 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ 50 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ ಗೆದ್ದಿರುವುದು 37 ಪಂದ್ಯಗಳಲ್ಲಿ ಮಾತ್ರ. ಇನ್ನು 3 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.

IND vs SA: ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಅಮೋಘ ಗೆಲುವು
India vs South Africa

ಏಕದಿನ ವಿಶ್ವಕಪ್​ನ 37ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (101) ಅಜೇಯ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಭಾರತೀಯ ಬೌಲರ್​ಗಳ ಕರಾರುವಾಕ್ ದಾಳಿಗೆ ತತ್ತರಿಸಿದರು. ಪರಿಣಾಮ ಕೇವಲ 27.1 ಓವರ್​ಗಳಲ್ಲಿ 83 ರನ್​ಗಳಿಸಿ ಸೌತ್ ಆಫ್ರಿಕಾ ತಂಡ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 243 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್​ನಲ್ಲಿ ಸೌತ್ ಆಫ್ರಿಕಾ ಹಾಗೂ ಭಾರತ ತಂಡಗಳು ಇದುವರೆಗೆ 91 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ 50 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ ಗೆದ್ದಿರುವುದು 37 ಪಂದ್ಯಗಳಲ್ಲಿ ಮಾತ್ರ. ಇನ್ನು 3 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.

ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಕಗಿಸೊ ರಬಾಡ, ಲುಂಗಿ ಎನ್ಗಿಡಿ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ, ಆಂಡಿಲೆ ಫೆಹ್ಲುಕ್ವಾಯೊ ಮತ್ತು ಲಿಝಾಡ್ ವಿಲಿಯಮ್ಸ್.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

LIVE Cricket Score & Updates

The liveblog has ended.
  • 05 Nov 2023 08:33 PM (IST)

    IND vs SA ICC World Cup 2023 Live Score: ಭಾರತಕ್ಕೆ ಅಮೋಘ ಗೆಲುವು

    ಕುಲ್ದೀಪ್ ಯಾದವ್ ಎಸೆದ 28ನೇ ಓವರ್​ನ ಮೊದಲ ಎಸೆತದಲ್ಲಿ ಲುಂಗಿ ಎನ್​ಗಿಡಿ ಕ್ಲೀನ್ ಬೌಲ್ಡ್​.

    27.1 ಓವರ್​ಗಳಲ್ಲಿ ಕೇವಲ 83 ರನ್​ಗಳಿಸಿ ಆಲೌಟ್ ಆದ ಸೌತ್ ಆಫ್ರಿಕಾ ತಂಡ.

    ಭಾರತ– 326/5 (50)

    ಸೌತ್ ಆಫ್ರಿಕಾ– 83 (27.1)

    ಸೌತ್ ಆಫ್ರಿಕಾ ವಿರುದ್ಧ 243 ರನ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ.

      

  • 05 Nov 2023 08:29 PM (IST)

    IND vs SA ICC World Cup 2023 Live Score: ಸೌತ್ ಆಫ್ರಿಕಾದ 9ನೇ ವಿಕೆಟ್ ಪತನ

    ರವೀಂದ್ರ ಜಡೇಜಾ ಎಸೆದ 27ನೇ ಓವರ್​ನ 2ನೇ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿದ ಕಗಿಸೊ ರಬಾಡ.

    ಸೌತ್ ಆಫ್ರಿಕಾ ತಂಡದ 9 ವಿಕೆಟ್ ಪತನ.

    ಕ್ರೀಸ್​ನಲ್ಲಿ ತಬ್ರೇಝ್ ಶಂಸಿ ಹಾಗೂ ಲುಂಗಿ ಎನ್​ಗಿಡಿ ಬ್ಯಾಟಿಂಗ್.

    RSA 83/9 (27)

      

      

  • 05 Nov 2023 08:27 PM (IST)

    IND vs SA ICC World Cup 2023 Live Score: ಸೌತ್ ಆಫ್ರಿಕಾದ 8ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆದ 26ನೇ ಓವರ್​ನ 4ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಮಾರ್ಕೊ ಯಾನ್ಸೆನ್ (14).

    ಸೌತ್ ಆಫ್ರಿಕಾ ತಂಡದ 8ನೇ ವಿಕೆಟ್ ಕೂಡ ಪತನ..ಗೆಲುವಿನತ್ತ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕಗಿಸೊ ರಬಾಡ ಹಾಗೂ ಲುಂಗಿ ಎನ್​ಗಿಡಿ ಬ್ಯಾಟಿಂಗ್.

    RSA 79/8 (26)

      

      

  • 05 Nov 2023 08:22 PM (IST)

    IND vs SA ICC World Cup 2023 Live Score: 25 ಓವರ್​ಗಳು ಮುಕ್ತಾಯ

    ಜಸ್​ಪ್ರೀತ್ ಬುಮ್ರಾ ಎಸೆದ 25ನೇ ಓವರ್​ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಮಾರ್ಕೊ ಯಾನ್ಸೆನ್.

    25 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 78 ರನ್​ಗಳು.

    ಕ್ರೀಸ್​ನಲ್ಲಿ ಕಗಿಸೊ ರಬಾಡ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 78/7 (25)

      

  • 05 Nov 2023 08:07 PM (IST)

    IND vs SA ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 69 ರನ್​ಗಳು.

    7 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ ಬೌಲರ್​ಗಳು.

    ಕ್ರೀಸ್​ನಲ್ಲಿ ಕಗಿಸೊ ರಬಾಡ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 69/7 (20)

      

  • 05 Nov 2023 08:02 PM (IST)

    IND vs SA ICC World Cup 2023 Live Score: ಸೋಲಿನ ಸುಳಿಯಲ್ಲಿ ಸೌತ್ ಆಫ್ರಿಕಾ

    ರವೀಂದ್ರ ಜಡೇಜಾ ಎಸೆದ 19ನೇ ಓವರ್​ನ 4ನೇ ಎಸೆತದಲ್ಲಿ ಕೇಶವ್ ಮಹಾರಾಜ್ ಕ್ಲೀನ್ ಬೌಲ್ಡ್​.

    ಸೌತ್ ಆಫ್ರಿಕಾ ತಂಡದ 7ನೇ ವಿಕೆಟ್ ಪತನ.

    ಟೀಮ್ ಇಂಡಿಯಾ ಗೆಲುವಿಗೆ ಕೇವಲ 3 ವಿಕೆಟ್​ಗಳ ಅಗತ್ಯತೆ.

    ಕ್ರೀಸ್​ನಲ್ಲಿ ಕಗಿಸೊ ರಬಾಡ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 67/7 (18.4)

      

  • 05 Nov 2023 07:56 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾಗೆ 6ನೇ ಯಶಸ್ಸು

    ರವೀಂದ್ರ ಜಡೇಜಾ ಎಸೆದ 17ನೇ ಓವರ್​ನ 3ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಕ್ಲೀನ್ ಬೌಲ್ಡ್​.

    11 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡೇವಿಡ್ ಮಿಲ್ಲರ್.

    ಕ್ರೀಸ್​ನಲ್ಲಿ ಕೇಶವ್ ಮಹಾರಾಜ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 64/6 (17)

      

  • 05 Nov 2023 07:42 PM (IST)

    IND vs SA ICC World Cup 2023 Live Score: ವೆಲ್ಕಂ ಬೌಂಡರಿ

    ರವೀಂದ್ರ ಜಡೇಜಾ ಎಸೆದ 15ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಡೇವಿಡ್ ಮಿಲ್ಲರ್.

    15 ಓವರ್​ಗಳ ಮುಕ್ತಾಯದ ವೇಳೆಗೆ 52 ರನ್ ಕಲೆಹಾಕಿದ ಸೌತ್ ಆಫ್ರಿಕಾ.

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 52/5 (15)

      

  • 05 Nov 2023 07:35 PM (IST)

    IND vs SA ICC World Cup 2023 Live Score: ಸೌತ್ ಆಫ್ರಿಕಾದ 5ನೇ ವಿಕೆಟ್ ಪತನ

    ಮೊಹಮ್ಮದ್ ಶಮಿ ಎಸೆದ 14ನೇ ಓವರ್​ನ ಮೊದಲ ಎಸೆತದಲ್ಲೇ ಎಲ್​ಬಿಡಬ್ಲ್ಯೂ ಆದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್.

    32 ಎಸೆತಗಳಲ್ಲಿ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಡುಸ್ಸೆನ್.

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಮಾರ್ಕೊ ಯಾನ್ಸೆನ್ ಬ್ಯಾಟಿಂಗ್.

    RSA 42/5 (14)

      

      

  • 05 Nov 2023 07:31 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾಗೆ 4ನೇ ಯಶಸ್ಸು

    ರವೀಂದ್ರ ಜಡೇಜಾ ಎಸೆದ 13ನೇ ಓವರ್​ನ 5ನೇ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಹೆನ್ರಿಕ್ ಕ್ಲಾಸೆನ್.

    ಟೀಮ್ ಇಂಡಿಯಾಗೆ ನಾಲ್ಕನೇ ಯಶಸ್ಸು ತಂದುಕೊಟ್ಟ ಜಡೇಜಾ.

    ಕ್ರೀಸ್​ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 40/4 (13)

      

  • 05 Nov 2023 07:17 PM (IST)

    IND vs SA ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಮೊಹಮ್ಮದ್ ಶಮಿ ಎಸೆದ 10ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.

    6 ಎಸೆತಗಳಲ್ಲಿ 9 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಮಾರ್ಕ್ರಾಮ್.

    10 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 35 ರನ್​ಗಳು.

    ಕ್ರೀಸ್​ನಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 35/3 (10)

      

  • 05 Nov 2023 07:09 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾಗೆ 2ನೇ ಯಶಸ್ಸು

    ರವೀಂದ್ರ ಜಡೇಜಾ ಎಸೆದ 9ನೇ ಓವರ್​ನ ಮೂರನೇ ಎಸೆತದಲ್ಲಿ ಟೆಂಬಾ ಬವುಮಾ ಕ್ಲೀನ್ ಬೌಲ್ಡ್​.

    19 ಎಸೆತಗಳಲ್ಲಿ 11 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೌತ್ ಆಫ್ರಿಕಾ ತಂಡದ ನಾಯಕ.

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 27/2 (9)

      

      

  • 05 Nov 2023 07:06 PM (IST)

    IND vs SA ICC World Cup 2023 Live Score: ಮೇಡನ್ ಓವರ್

    8ನೇ ಓವರ್​ ಅನ್ನು ಮೇಡನ್ ಮಾಡಿದ ಮೊಹಮ್ಮದ್ ಸಿರಾಜ್.

    8 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 21 ರನ್​ಗಳು.

    ಕ್ರೀಸ್​ನಲ್ಲಿ ಟೆಂಬಾ ಬವುಮಾ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 21/1 (8)

      

  • 05 Nov 2023 06:53 PM (IST)

    IND vs SA ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಜಸ್​ಪ್ರೀತ್ ಬುಮ್ರಾ ಎಸೆದ 5ನೇ ಓವರ್​ನ 2ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಫೋರ್ ಬಾರಿಸಿದ ಟೆಂಬಾ ಬವುಮಾ.

    ಐದು ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 17 ರನ್​ಗಳು.

    ಕ್ರೀಸ್​ನಲ್ಲಿ ಟೆಂಬಾ ಬವುಮಾ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 17/1 (5)

    ಕ್ವಿಂಟನ್ ಡಿಕಾಕ್ (5) ಔಟ್.

      

  • 05 Nov 2023 06:45 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಆರಂಭ

    3ನೇ ಓವರ್​ನಲ್ಲಿ ಕೇವಲ 1 ರನ್ ನೀಡಿದ ಜಸ್​ಪ್ರೀತ್ ಬುಮ್ರಾ.

    ಟೀಮ್ ಇಂಡಿಯಾ ಬೌಲರ್​ಗಳಿಂದ ಉತ್ತಮ ಆರಂಭ.

    ಕ್ರೀಸ್​ನಲ್ಲಿ ಟೆಂಬಾ ಬವುಮಾ ಹಾಗೂ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಬ್ಯಾಟಿಂಗ್.

    RSA 7/1 (3)

      

  • 05 Nov 2023 06:39 PM (IST)

    IND vs SA ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್ ಆರಂಭ

    ಮೊದಲ ಓವರ್​ನಲ್ಲೇ ಕೇವಲ 2 ರನ್ ನೀಡಿದ ಜಸ್​ಪ್ರೀತ್ ಬುಮ್ರಾ.

    ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್​ನ 3ನೇ ಎಸೆತದಲ್ಲಿ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.

    ನಾಲ್ಕನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ರನ್ನು ಬೌಲ್ಡ್ ಮಾಡಿದ ಮೊಹಮ್ಮದ್ ಸಿರಾಜ್.

    ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಸಿರಾಜ್.

    RSA 6/1 (2)

      

      

      

  • 05 Nov 2023 05:58 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    ಕೊನೆಯ ಓವರ್​ನಲ್ಲಿ ಸಿಕ್ಸ್​ ಹಾಗೂ ಫೋರ್​ಗಳೊಂದಿಗೆ 15 ರನ್ ಬಾರಿಸಿದ ರವೀಂದ್ರ ಜಡೇಜಾ.

    50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಟೀಮ್ ಇಂಡಿಯಾ ಪರ ಅಜೇಯ 101 ರನ್ ಬಾರಿಸಿ ಮಿಂಚಿದ ವಿರಾಟ್ ಕೊಹ್ಲಿ

    ಭಾರತ– 326/5 (50)

    ಸೌತ್ ಆಫ್ರಿಕಾ ತಂಡಕ್ಕೆ 327 ರನ್​ಗಳ ಗುರಿ ನೀಡಿದ ಟೀಮ್ ಇಂಡಿಯಾ.

      

  • 05 Nov 2023 05:46 PM (IST)

    IND vs SA ICC World Cup 2023 Live Score: ಶತಕ ಪೂರೈಸಿದ ವಿರಾಟ್ ಕೊಹ್ಲಿ

    119 ಎಸೆತಗಳಲ್ಲಿ ಶತಕ ಪೂರೈಸಿದ ವಿರಾಟ್ ಕೊಹ್ಲಿ.

    ಈ ಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ (49) ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.

    IND 309/5 (49)

      

      

  • 05 Nov 2023 05:40 PM (IST)

    IND vs SA ICC World Cup 2023 Live Score: ಶತಕದತ್ತ ವಿರಾಟ್ ಕೊಹ್ಲಿ

    ಕಗಿಸೊ ರಬಾಡ ಎಸೆದ 47ನೇ ಓವರ್​ನ 5ನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​​ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    ಈ ಫೋರ್​ನೊಂದಿಗೆ ವಿರಾಟ್ ಕೊಹ್ಲಿಯ ವೈಯುಕ್ತಿಕ ಸ್ಕೋರ್ 97 ರನ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.

    IND 293/5 (47)

      

  • 05 Nov 2023 05:36 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾದ 5ನೇ ವಿಕೆಟ್ ಪತನ

    ತಬ್ರೇಝ್ ಶಂಸಿ ಎಸೆದ 46ನೇ ಓವರ್​ನ ಕೊನೆಯ ಎಸೆತದಲ್ಲಿ ಸ್ವೀಪ್ ಶಾಟ್ ಬಾರಿಸಲು ಯತ್ನಿಸಲು ಸೂರ್ಯಕುಮಾರ್ ಯಾದವ್. ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಅದ್ಭುತ ಡೈವಿಂಗ್ ಕ್ಯಾಚ್.

    14 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.

    IND 285/5 (46)

      

  • 05 Nov 2023 05:29 PM (IST)

    IND vs SA ICC World Cup 2023 Live Score: ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ

    ಮಾರ್ಕೊ ಯಾನ್ಸೆನ್ ಎಸೆದ 45ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್.

    45 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 278 ರನ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 278/4 (45)

      

  • 05 Nov 2023 05:17 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ

    ಮಾರ್ಕೊ ಯಾನ್ಸೆನ್ ಎಸೆದ 43ನೇ ಓವರ್​ನ ಮೊದಲ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಹೊಡೆತ ಬಾರಿಸಿದ ಕೆಎಲ್ ರಾಹುಲ್. ಬೌಂಡರಿ ಲೈನ್​ನಲ್ಲಿ ಅತ್ಯುತ್ತಮ ರನ್ನಿಂಗ್ ಕ್ಯಾಚ್ ಹಿಡಿದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್. ಕೆಎಲ್ ರಾಹುಲ್ (7) ಔಟ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್.

    IND 253/4 (43)

      

      

  • 05 Nov 2023 05:05 PM (IST)

    IND vs SA ICC World Cup 2023 Live Score: 40 ಓವರ್​ಗಳು ಮುಕ್ತಾಯ

    40 ಓವರ್​ಗಳ ಮುಕ್ತಾಯದ ವೇಳೆಗೆ 239 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕೊನೆಯ 10 ಓವರ್​ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಭಾರತ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (75) ಹಾಗೂ ಕೆಎಲ್ ರಾಹುಲ್ (5) ಬ್ಯಾಟಿಂಗ್.

    IND 239/3 (40)

    ರೋಹಿತ್ ಶರ್ಮಾ (40), ಶುಭ್​ಮನ್ ಗಿಲ್ (23) ಹಾಗೂ ಶ್ರೇಯಸ್ ಅಯ್ಯರ್ (77) ಔಟ್.

      

  • 05 Nov 2023 04:46 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ

    ಲುಂಗಿ ಎನ್​​ಗಿಡಿ ಎಸೆದ 37ನೇ ಓವರ್​ನ ಐದನೇ ಎಸೆತದಲ್ಲಿ ಭರ್ಜರಿ ಹೊಡತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್.

    87 ಎಸೆತಗಳಲ್ಲಿ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೇಯಸ್ ಅಯ್ಯರ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 227/3 (37)

      

      

  • 05 Nov 2023 04:37 PM (IST)

    IND vs SA ICC World Cup 2023 Live Score: 35 ಓವರ್​ಗಳು ಮುಕ್ತಾಯ

    ಲುಂಗಿ ಎನ್​​ಗಿಡಿ ಎಸೆದ 35ನೇ ಓವರ್​ನ ಮೊದಲ ಎಸೆತದಲ್ಲೇ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    35 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 219 ರನ್​ಗಳು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    IND 219/2 (35)

      

  • 05 Nov 2023 04:31 PM (IST)

    IND vs SA ICC World Cup 2023 Live Score: ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ

    ಐಡೆನ್ ಮಾರ್ಕ್ರಾಮ್ ಎಸೆದ 34ನೇ ಓವರ್​ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಶ್ರೇಯಸ್ ಅಯ್ಯರ್.

    34ನೇ ಓವರ್​ನಲ್ಲಿ ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    IND 213/2 (34)

      

  • 05 Nov 2023 04:16 PM (IST)

    IND vs SA ICC World Cup 2023 Live Score: ಅಯ್ಯರ್ ಅಬ್ಬರ ಶುರು

    ಮಾರ್ಕೊ ಯಾನ್ಸೆನ್ ಎಸೆದ 31ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.

    ಈ ಫೋರ್​ನೊಂದಿಗೆ 63 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶ್ರೇಯಸ್.

    ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಮತ್ತೊಂದು ಫೋರ್ ಬಾರಿಸಿದ ಅಯ್ಯರ್.

    ಈ ಫೋರ್​ನೊಂದಿಗೆ ಕೊಹ್ಲಿ-ಶ್ರೇಯಸ್ ಅಯ್ಯರ್ ನಡುವೆ 100 ರನ್​ಗಳ ಜೊತೆಯಾಟ ಪೂರ್ಣ.

    IND 193/2 (31)

      

  • 05 Nov 2023 04:03 PM (IST)

    IND vs SA ICC World Cup 2023 Live Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ

    67 ಎಸೆತಗಳಲ್ಲಿ 5 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.

    ಇದು ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿಯ 71ನೇ ಅರ್ಧಶತಕ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 170/2 (29)

      

  • 05 Nov 2023 04:01 PM (IST)

    IND vs SA ICC World Cup 2023 Live Score: ಸಿಕ್ಸರ್ ಶ್ರೇಯಸ್

    ತಬ್ರೇಝ್ ಶಂಸಿ ಎಸೆದ 28ನೇ ಓವರ್​ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಶ್ರೇಯಸ್ ಅಯ್ಯರ್.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 163/2 (28)

      

  • 05 Nov 2023 03:51 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್

    ಮೊದಲ 10 ಓವರ್​ಗಳಲ್ಲಿ 91 ರನ್ ಕಲೆಹಾಕಿದ್ದ ಟೀಮ್ ಇಂಡಿಯಾ.

    25 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 143 ರನ್​ಗಳು.

    ಟೀಮ್ ಇಂಡಿಯಾ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಸೌತ್ ಆಫ್ರಿಕಾ ಬೌಲರ್​ಗಳು.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ (24) ಹಾಗೂ ವಿರಾಟ್ ಕೊಹ್ಲಿ (42) ಬ್ಯಾಟಿಂಗ್.

    IND 143/2 (25)

      

  • 05 Nov 2023 03:34 PM (IST)

    IND vs SA ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 124 ರನ್​ಗಳು.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ (11) ಹಾಗೂ ವಿರಾಟ್ ಕೊಹ್ಲಿ (37) ಬ್ಯಾಟಿಂಗ್.

     ರೋಹಿತ್ ಶರ್ಮಾ (40) ಹಾಗೂ ಶುಭ್​ಮನ್ ಗಿಲ್ (23) ಔಟ್.

    IND 124/2 (20)

      

  • 05 Nov 2023 03:25 PM (IST)

    IND vs SA ICC World Cup 2023 Live Score: ವೆಲ್ಕಂ ಬೌಂಡರಿ

    ಲುಂಗಿ ಎನ್​ಗಿಡಿ ಎಸೆದ 18ನೇ ಓವರ್​ನ 3ನೇ ಎಸೆತದಲ್ಲಿ ಥರ್ಡ್​ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    18 ಓವರ್​ಗಳಲ್ಲಿ 118 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 118/2 (18)

      

  • 05 Nov 2023 03:11 PM (IST)

    IND vs SA ICC World Cup 2023 Live Score: 15 ಓವರ್​ಗಳು ಮುಕ್ತಾಯ

    15 ಓವರ್​ಗಳಲ್ಲಿ 105 ರನ್ ಕಲೆಹಾಕಿರುವ ಟೀಮ್ ಇಂಡಿಯಾ.

    2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿರುವ ಸೌತ್ ಆಫ್ರಿಕಾ ಬೌಲರ್​ಗಳು.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ (7) ಹಾಗೂ ವಿರಾಟ್ ಕೊಹ್ಲಿ (24) ಬ್ಯಾಟಿಂಗ್.

    IND 105/2 (15)

     ರೋಹಿತ್ ಶರ್ಮಾ (40) ಹಾಗೂ ಶುಭ್​ಮನ್ ಗಿಲ್ (23) ಔಟ್.

  • 05 Nov 2023 03:07 PM (IST)

    IND vs SA ICC World Cup 2023 Live Score: ಶತಕ ಪೂರೈಸಿದ ಟೀಮ್ ಇಂಡಿಯಾ

    14 ಓವರ್​ಗಳಲ್ಲಿ ಶತಕ ಪೂರೈಸಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಔಟ್.

    IND 103/2 (14)

      

  • 05 Nov 2023 02:55 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ

    ಸ್ಪಿನ್ನರ್ ಕೇಶವ್ ಮಹಾರಾಜ್ ಎಸೆದ 11ನೇ ಓವರ್​ನ 3ನೇ ಎಸೆತದಲ್ಲಿ ಶುಭ್​ಮನ್ ಗಿಲ್ ಕ್ಲೀನ್ ಬೌಲ್ಡ್​.

    24 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್​ಮನ್ ಗಿಲ್.

    ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 93/2 (10.3)

      

  • 05 Nov 2023 02:51 PM (IST)

    IND vs SA ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಕಗಿಸೊ ರಬಾಡ ಎಸೆದ 10ನೇ ಓವರ್​ನ 2ನೇ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ.

    3ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್​ನಿಂದ ಸ್ಟ್ರೈಟ್ ಹಿಟ್ ಫೋರ್.

    10 ಓವರ್​ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ (23) ಹಾಗೂ ವಿರಾಟ್ ಕೊಹ್ಲಿ (18) ಬ್ಯಾಟಿಂಗ್.

    IND 91/1 (10)

    ರೋಹಿತ್ ಶರ್ಮಾ (40) ಔಟ್.

      

  • 05 Nov 2023 02:42 PM (IST)

    IND vs SA ICC World Cup 2023 Live Score: ಕಿಂಗ್ ಕೊಹ್ಲಿ ಮಾರ್ಕ್​

    ಕಗಿಸೊ ರಬಾಡ ಎಸೆದ 8ನೇ ಓವರ್​ನ 3ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 72/1 (8)

      

  • 05 Nov 2023 02:34 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ

    ಕಗಿಸೊ ರಬಾಡ ಎಸೆದ 6ನೇ ಓವರ್​ನ 5ನೇ ಎಸೆತದಲ್ಲಿ ಮಿಡ್ ಆಫ್​ನಲ್ಲಿ ಫೀಲ್ಡ್​ನಲ್ಲಿ ಟೆಂಬಾ ಬವುಮಾಗೆ ಕ್ಯಾಚ್ ನೀಡಿದ ರೋಹಿತ್ ಶರ್ಮಾ.

    24 ಎಸೆತಗಳಲ್ಲಿ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್​ಮ್ಯಾನ್.

    ಸೌತ್ ಆಫ್ರಿಕಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ರಬಾಡ.

    ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 62/1 (6)

      

  • 05 Nov 2023 02:29 PM (IST)

    IND vs SA ICC World Cup 2023 Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ

    ಲುಂಗಿ ಎನ್​ಗಿಡಿ ಎಸೆದ 5ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ರೋಹಿತ್ ಶರ್ಮಾ.

    5ನೇ ಎಸೆತದಲ್ಲಿ ರೋಹಿತ್ ಶರ್ಮಾ ಬ್ಯಾಟ್​ನಿಂದ ಲೆಗ್ ಸೈಡ್​ನತ್ತ ಮತ್ತೊಂದು ಸಿಕ್ಸ್​.

    5 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 61 ರನ್​ಗಳು.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 61/0 (5)

      

  • 05 Nov 2023 02:17 PM (IST)

    IND vs SA ICC World Cup 2023 Live Score: ರೋಹಿತ್=ಹಿಟ್​ಮ್ಯಾನ್

    ಕಗಿಸೊ ರಬಾಡ ಎಸೆದ 3ನೇ ಓವರ್​ನ 2ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಸಿಡಿಸಿದ ರೋಹಿತ್ ಶರ್ಮಾ.

    3ನೇ ಎಸೆತದಲ್ಲಿ ಹಿಟ್​ಮ್ಯಾನ್ ಬ್ಯಾಟ್​ನಿಂದ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಮತ್ತೊಂದು ಫೋರ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 35/0 (3)

      

  • 05 Nov 2023 02:12 PM (IST)

    IND vs SA ICC World Cup 2023 Live Score: ಸ್ವೀಪರ್ ಕವರ್ ಬೌಂಡರಿ

    ಮಾರ್ಕೊ ಯಾನ್ಸೆನ್ ಎಸೆದ 2ನೇ ಓವರ್​ನ 3ನೇ ಎಸೆತದಲ್ಲಿ ಆಕರ್ಷಕ ಸ್ವೀಪರ್ ಕವರ್ ಫೋರ್ ಬಾರಿಸಿದ ಶುಭ್​ಮನ್ ಗಿಲ್.

    5ನೇ ಎಸೆತದಲ್ಲಿ ಶುಭ್​ಮನ್ ಬ್ಯಾಟ್​ನಿಂದ ಡೀಪ್ ಮಿಡ್ ವಿಕೆಟ್​ನತ್ತ ಮತ್ತೊಂದು ಫೋರ್.

    2ನೇ ಓವರ್​ನಲ್ಲಿ 17 ರನ್ ನೀಡಿದ ಎಡಗೈ ವೇಗಿ ಮಾರ್ಕೊ ಯಾನ್ಸೆನ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 22/0 (2)

      

  • 05 Nov 2023 02:05 PM (IST)

    IND vs SA ICC World Cup 2023 Live Score: ಟೀಮ್ ಇಂಡಿಯಾ ಇನಿಂಗ್ಸ್​ ಆರಂಭ

    ಲುಂಗಿ ಎನ್​ಗಿಡಿ ಎಸೆದ ಮೊದಲ ಓವರ್​ನ 4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್​ ಬಾರಿಸಿದ ರೋಹಿತ್ ಶರ್ಮಾ.

    ಭರ್ಜರಿ ಬೌಂಡರಿಯೊಂದಿಗೆ ಟೀಮ್ ಇಂಡಿಯಾ ರನ್ ಖಾತೆ ತೆರೆದ ಹಿಟ್​ಮ್ಯಾನ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಬ್ಯಾಟಿಂಗ್.

    IND 5/0 (1)

      

  • 05 Nov 2023 01:38 PM (IST)

    IND vs SA ICC World Cup 2023 Live Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.

  • 05 Nov 2023 01:37 PM (IST)

    IND vs SA ICC World Cup 2023 Live Score: ಸೌತ್ ಆಫ್ರಿಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ತಬ್ರೇಝ್ ಶಮ್ಸಿ, ಕಗಿಸೊ ರಬಾಡ, ಲುಂಗಿ ಎನ್ಗಿಡಿ

  • 05 Nov 2023 01:33 PM (IST)

    IND vs SA ICC World Cup 2023 Live Score: ಟಾಸ್ ಗೆದ್ದ ಟೀಮ್ ಇಂಡಿಯಾ

    ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Nov 05,2023 1:33 PM

    Follow us
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ