Video: ಉದ್ಘಾಟನೆಗೊಂಡು 2 ತಿಂಗಳಲ್ಲೇ ಬಿರುಕುಬಿಟ್ಟ ಪಾಟ್ನಾದ ಡಬಲ್ ಡೆಕ್ಕರ್ ಸೇತುವೆ

Updated on: Aug 04, 2025 | 11:00 AM

ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಎಎನ್​ಐ ವಿಡಿಯೋವೊಂದನ್ನು ಹಂಚಿಕೊಂಡಿದೆ.ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು. ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು.

ಪಾಟ್ನಾ, ಆಗಸ್ಟ್​ 04: ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಎಎನ್​ಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು.

ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಪಾಟ್ನಾ ಕಾಲೇಜಿನಿಂದ ಬಿಎನ್ ಕಾಲೇಜು ಮತ್ತು ಟೈಯರ್ 2 (ಮೇಲಿನ ಡೆಕ್) ವರೆಗೆ 1.45 ಕಿ.ಮೀ ಉದ್ದದ ಟೈಯರ್ 1 (ಕೆಳಗಿನ ಡೆಕ್), ಕಾರ್ಗಿಲ್ ಚೌಕ್ ನಿಂದ ಶತಾಬ್ದಿ ದ್ವಾರದವರೆಗೆ 2.2 ಕಿ.ಮೀ ಕಾರಿಡಾರ್ ಅನ್ನು ಹೊಂದಿದ್ದು, ಪಾಟ್ನಾ ವಿಜ್ಞಾನ ಕಾಲೇಜನ್ನು ಹಾದುಹೋಗುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More