Chikkamagaluru News: ಅತ್ತ ಹಾಫ್​ ಹೆಲ್ಮೆಟ್​​ ಧರಿಸಿ ಬೈಕ್​ ಚಲಾಯಿಸಿದ್ರೆ ದಂಡ; ಇತ್ತ ಬೈಕಿನಲ್ಲಿದ್ದ ಫುಲ್ ಹೆಲ್ಮೆಟ್ ಕಳ್ಳತನ

| Updated By: ವಿವೇಕ ಬಿರಾದಾರ

Updated on: Jun 29, 2023 | 9:43 PM

ಚಿಕ್ಕಮಗಳೂರು ನಗರದಲ್ಲಿ ಹಾಫ್​ ಹೆಲ್ಮೆಟ್​​ ಹಾಕಿಕೊಂಡು ಬೈಕ್​ ಚಾಲನೆ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು ಒಂದಡೆಯಾದರೇ, ಮತ್ತೊಂದಡೆ ಫುಲ್​ ಹೆಲ್ಮೆಟ್​ಗಳು ಕಳ್ಳತನವಾಗುತ್ತಿವೆ.

ಚಿಕ್ಕಮಗಳೂರು: ನಗರದಲ್ಲಿ ಹಾಫ್​ ಹೆಲ್ಮೆಟ್​​ ಹಾಕಿಕೊಂಡು ಬೈಕ್​ ಚಾಲನೆ ಮಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಹಾಫ್ ಹೆಲ್ಮೆಟ್ ಸೀಜ್ ಮಾಡುತ್ತಿದ್ದು, ಜೊತೆಗೆ ದಂಡ ಹಾಕುತ್ತಿದ್ದಾರೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಫುಲ್​ ಹೆಲ್ಮೆಟ್​​ಗಳ ಕಳ್ಳತನಗಳು ಜಾಸ್ತಿಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹೌದು ಪೊಲೀಸರ ಫೈನ್ ನಿಂದ ತಪ್ಪಿಸಿಕೊಳ್ಳಲು ಕೆಲ ಬೈಕ್​ ಸವಾರರು ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಬೈಕಿನಲ್ಲಿದ್ದ ಫುಲ್ ಹೆಲ್ಮೆಟ್​ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಒಂದೇ ದಿನ ನಗರದಲ್ಲಿ ನೂರಾರು ಹೆಲ್ಮೆಟ್​​ಗಳ ಕಳ್ಳತನವಾಗಿವೆ. ಹೆಲ್ಮೆಟ್ ಕಳ್ಳರ ಕೈ ಚಳಕ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ನಗರದ M.G ರೋಡ್, K.M ರೋಡ್,IG ರೋಡ್​ನಲ್ಲಿ ಹೆಚ್ಚು ಕಳ್ಳತನವಾಗುತ್ತಿದೆ.

Follow us on