ತುಮಕೂರು: ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲು ಪಾವಗಡ ಎಸ್ ಬಿಐ ಶಾಖೆಯೆದುರು ಜನಜಂಗುಳಿ!
ಯುವನಿಧಿಯೊಂದನ್ನು ಬಿಟ್ಟು ಉಳಿದ 4 ಗ್ಯಾರಂಟಿಗಳು ಒಂದೋ ಜಾರಿಗೊಂಡಿವೆ ಇಲ್ಲವೇ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ, ಅನ್ನ ಭಾಗ್ಯ ಯೋಜನೆಯಡಿ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ.
ತುಮಕೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು (guarantees) ಜನರನ್ನು ಸೇವಾ ಸಿಂಧು ಕೇಂದ್ರ, ವಿವಿಧ ಜಿಲ್ಲೆಗಳ ವನ್ ಕೇಂದ್ರಗಳು ಮತ್ತು ಬ್ಯಾಂಕ್ ಗಳ ಮುಂದೆ ಸಾಲುಗಟ್ಟುವಂತೆ ಮಾಡುತ್ತಿವೆ. ಯುವನಿಧಿಯೊಂದನ್ನು ಬಿಟ್ಟು ಉಳಿದ 4 ಗ್ಯಾರಂಟಿಗಳು ಒಂದೋ ಜಾರಿಗೊಂಡಿವೆ ಇಲ್ಲವೇ ನೋಂದಣಿ ಪ್ರಕ್ರಿಯೆ (registration process) ಜಾರಿಯಲ್ಲಿದೆ. ತುಮಕೂರಿನ ಪಾವಗಡದಿಂದ (Pavagada) ಲಭ್ಯವಾಗಿರುವ ಈ ದೃಶ್ಯ ನೋಡಿ. ಗ್ಯಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆನಗಳ ಅಡಿ ಫಲಾನುಭವಿಗಳಾಗಲು ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ಖಾತೆಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳ ಸಂಖ್ಯೆ, ಮೊಬೈಲ್ ನಂಬರ್ ಗಳು ಲಿಂಕ್ ಆಗಬೇಕಿರುವುದು ಅತ್ಯವಶ್ಯಕವಾಗಿದೆ. ಪಾವಗಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಮುಂದೆ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಜಾತ್ರೆಯಂತೆ ನೆರೆದಿದ್ದಾರೆ. ತಳ್ಳಾಟ-ನೂಕಾಟದ ನಡುವೆ ಕೆಲವರು ಬ್ಯಾಂಕಿನ ಕಂಪೌಂಡ್ ಹಾರುತ್ತಿದ್ದಾರೆ.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us