Karnataka Assembly Polls; ಸಚಿವ ಸುಧಾಕರ್ ಬಳಿ ಸಾಕಷ್ಟು ಸಂಪತ್ತಿದೆ ಅಂತ ಮತದಾರ ಕೈಬಿಟ್ಟರೆ ಆಶ್ಚರ್ಯವಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 04, 2023 | 6:08 PM

ಸುಧಾಕರ್ ಬಳಿ ಸಾಕಷ್ಟು ಸಂಪತ್ತಿದೆ ಅಂತ ಜನಕ್ಕೆ ಗೊತ್ತಾಗಿರುವುದರಿಂದ ಅವರಿಗೆ ರಾಜೀನಾಮೆ ನೀಡುವ ಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಜೆಡಿಎಸ್ ಪಕ್ಷದ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಕಾಮೆಂಟ್ ಮಾಡುತ್ತಿರುವುದು ವರದಿಯಾಗುತ್ತಿವೆ. ಕುಮಾರಸ್ವಾಮಿ ಇಂದು ಬೆಂಗಳೂರಲ್ಲಿ ಸುದ್ದ್ದಿಗಾರರೊಂದಿಗೆ ಮಾತಾಡುವಾಗ ತಿರುಗೇಟು ನೀಡಿದರು. ಸುಧಾಕರ್ ಸಚಿವರಾಗಿ ಸಾಕಷ್ಟು ಸಂಪಾದನೆ ಮಾಡಿರುವಂತಿದೆ, ಜನರಿಗೆ ಫ್ರಿಡ್ಜ್, ಟಿವಿ ಮತ್ತು ಸ್ಟೌಗಳನ್ನು ನೀಡುತ್ತಿರುವುದು ಜನರಲ್ಲಿ ಅವರ ಸಂಪಾದನೆಯ ಬಗ್ಗೆ ಆಶ್ಚರ್ಯ ಮೂಡಿಸಿದೆ. ಅವರಲ್ಲಿ ಸಾಕಷ್ಟು ಸಂಪತ್ತಿದೆ (wealth) ಅಂತ ಜನಕ್ಕೆ ಗೊತ್ತಾಗಿರುವುದರಿಂದ ಶಾಸಕಾರಾಗಿ ಆಯ್ಕೆಯಾಗುವುದು ಕೂಡ ಕಷ್ಟವೆನಿಸುತ್ತಿದೆ ಮತ್ತು ಅವರಿಗೆ ರಾಜೀನಾಮೆ ನೀಡುವ ಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.