LIVE:ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್: ಸ್ಪೇಸ್ ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಸಂವಾದದ ನೇರ ಪ್ರಸಾರ

Updated on: Aug 23, 2026 | 10:05 AM

PM Modi meets CEOs of 20 space startups:ದೇಶದ ಬಾಹ್ಯಾಕಾಶ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಖಾಸಗಿ ನವೋದ್ಯಮಗಳ (Space Startups) ಸಿಇಒಗಳು ಮತ್ತು ಸಂಸ್ಥಾಪಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಂವಾದ ನಡೆಸುತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಚರ್ಚೆ ಆರಂಭಿಸಿದ್ದಾರೆ. ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ್ ಸ್ಪೇಸ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ಗ್ಯಾಲಕ್ಸಿ ಐ ಮತ್ತು ದಿಗಂತರಾ ಸೇರಿದಂತೆ ಸುಮಾರು 20 ಪ್ರಮುಖ ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರು ಭಾಗವಹಿಸಿವೆ.

ನವದೆಹಲಿ, ಆಗಸ್ಟ್​ 23: ದೇಶದ ಬಾಹ್ಯಾಕಾಶ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಖಾಸಗಿ ನವೋದ್ಯಮಗಳ (Space Startups) ಸಿಇಒಗಳು ಮತ್ತು ಸಂಸ್ಥಾಪಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಂವಾದ ನಡೆಸುತ್ತಿದ್ದಾರೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಚರ್ಚೆ ಆರಂಭಿಸಿದ್ದಾರೆ.

ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ್ ಸ್ಪೇಸ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ಗ್ಯಾಲಕ್ಸಿ ಐ ಮತ್ತು ದಿಗಂತರಾ ಸೇರಿದಂತೆ ಸುಮಾರು 20 ಪ್ರಮುಖ ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರು ಭಾಗವಹಿಸಿವೆ.

ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉಪಗ್ರಹ ದತ್ತಾಂಶವನ್ನು ಕೇವಲ ರಾಕೆಟ್ ಉಡಾವಣೆಗೆ ಸೀಮಿತಗೊಳಿಸದೆ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಹವಾಮಾನ ಮುನ್ಸೂಚನೆಗೆ ಬಳಸಲು ಪ್ರಧಾನಿ ಕರೆ ನೀಡಿದ್ದಾರೆ. ಶಾಲಾ-ಕಾಲೇಜು ಮಟ್ಟದಲ್ಲೇ ಯುವಜನರಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ಸ್ಟಾರ್ಟ್‌ಅಪ್‌ಗಳು ಕೈಜೋಡಿಸಬೇಕೆಂದು ಸಲಹೆ ನೀಡಿದರು.

ಖಾಸಗಿ ಹೂಡಿಕೆಗೆ ಉತ್ತೇಜನ: IN-SPACe ಮತ್ತು ಹೊಸ ಬಾಹ್ಯಾಕಾಶ ನೀತಿಯ ಮೂಲಕ ಭಾರತವು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ತನ್ನ ಪಾಲನ್ನು ಶೇ. 8 ಕ್ಕಿಂತ ಹೆಚ್ಚಿಸುವ ಗುರಿ ಹೊಂದಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಭೂ-ವೀಕ್ಷಣಾ ಉಪಗ್ರಹಗಳು ಹಾಗೂ ಮರುಬಳಕೆ ಮಾಡಬಹುದಾದ ರಾಕೆಟ್‌ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ಘೋಷಿಸಿದೆ. ನವೋದ್ಯಮಿಗಳನ್ನುದ್ದೇಶಿ ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ ಇಲ್ಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 23, 2026 09:59 AM
Loading...
Unable to load recommendations.
Follow Us