ವ್ಹೀಲ್ ಚೇರ್​ನಲ್ಲಿ ಕುಳಿತಿದ್ದ ಪ್ರತೀಕಾಗೆ ಸಿಹಿ ತಿನಿಸು ನೀಡಿ ಸತ್ಕರಿಸಿದ ಮೋದಿ; ವಿಡಿಯೋ

Updated on: Nov 06, 2025 | 7:14 PM

PM Modi's Sweet Gesture: 2025 ರ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಧಾನಿ ಮೋದಿ ಭೋಜನಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ವ್ಹೀಲ್ ಚೇರ್‌ನಲ್ಲಿದ್ದ ಆಟಗಾರ್ತಿ ಪ್ರತೀಕಾ ರಾವಲ್ ಅವರಿಗೆ ಮೋದಿ ಸ್ವತಃ ಸಿಹಿ ತಿನಿಸು ನೀಡಿ ಸತ್ಕರಿಸಿದ್ದಾರೆ. ಪ್ರಧಾನಿ ಮೋದಿ ಅವರ ಈ ಸರಳತೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ವಿಡಿಯೋ ವೈರಲ್ ಆಗಿದೆ.

2025 ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಪ್ರಿಕಾವನ್ನು ಮಣಿಸಿದ ಭಾರತ ಮಹಿಳಾ ತಂಡ ಮೊಟ್ಟ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು. ಭಾರತದ ವನಿತೆಯರ ಈ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಈ ವೀರ ನಾರಿಮಣಿಯರಿಗೆ ನವೆಂಬರ್ 5 ರಂದು ಭೋಜನ ಕೂಟ ಆಯೋಜಿಸಿದ್ದರು. ಈ ಔತಣಕೂಡಕ್ಕೂ ಮುನ್ನ ಮೋಧಿ ಅವರು ಇಡೀ ತಂಡದೊಂದಿಗೆ ಮಾತುಕತೆ ನಡೆಸಿದರು. ಆ ಬಳಿಕ ಆಟಗಾರ್ತಿಯರು ಔತಣಕೂಟದಲ್ಲಿ ಭಾಗಿಯಾದರು. ಈ ವೇಳೆ ವ್ಹೀಲ್ ಚೇರ್​ನಲ್ಲಿ ಕುಳಿತು ಭೋಜನ ಸವಿಯುತ್ತಿದ್ದ ಟೀಂ ಇಂಡಿಯಾ ಆಟಗಾರ್ತಿ ಪ್ರತೀಕಾ ರಾವಲ್ ಅವರಿಗೆ ಸ್ವತಃ ಪ್ರಧಾನಿ ಮೋದಿ ಅವರೇ ಸಿಹಿ ತಿನಿಸು ನೀಡಿ ಸತ್ಕರಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮೋದಿ ಅವರ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 06, 2025 06:35 PM