PM Modi In Mysuru: ಒಡೆಯರ್​ಗಳ ಅರಮನೆಯಲ್ಲಿ ಪ್ರಧಾನಿ ಮೋದಿ ಮೈಸೂರು ಪಾಕ್ ಸವಿದರೋ ಇಲ್ಲವೋ ಗೊತ್ತಾಗಲಿಲ್ಲ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2022 | 5:01 PM

ಪ್ರಧಾನಿ ಅವರಿಗೆ ಉಪಹಾರದಲ್ಲಿ ಇಡ್ಲಿ, ಪೊಂಗಲ್, ದೋಸೆ, ಉಪ್ಪಿಟ್ಟು ಮತ್ತು ಕಾಶಿ ಹಲ್ವಾ ನೀಡಲಾಗಿದೆ. ರಾಜಮಾತೆ ಪ್ರಮೋದಾ ದೇವಿಯವರು ಮೈಸೂರು ಪಾಕನ್ನು ಸಹ ಪ್ರಧಾನಿಗಳಿಗೆ ನೀಡಲಾಗುವುದು ಅಂತ ಹೇಳಿದ್ದರು. ಅದನ್ನು ಅವರಿ ತಿಂದರೋ ಇಲ್ಲವೋ ಅಂತ ಗೊತ್ತಾಗಿಲ್ಲ ಮಾರಾಯ್ರೇ.

ಮೈಸೂರು ಒಡೆಯರ್​ಗಳ ಅರಮನೆಯನ್ನು(palace) ನಾವೆಲ್ಲ ಹೊರಗಿನಿಂದ ಮಾತ್ರ ನೋಡಿದ್ದೇವೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಂಗಳವಾರ ಬೆಳಗ್ಗೆ ಉಪಹಾರಕ್ಕಾಗಿ ಆಮಂತ್ರಿತರಾಗಿದ್ದ ಕಾರಣ ಒಳಭಾಗದ ಸ್ವಲ್ಪ ಭಾಗವನ್ನು ನಾವು ನೋಡಬಹುದು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಧಾನಿ ಅವರಿಗೆ ಉಪಹಾರದಲ್ಲಿ ಇಡ್ಲಿ, ಪೊಂಗಲ್, ದೋಸೆ, ಉಪ್ಪಿಟ್ಟು ಮತ್ತು ಕಾಶಿ ಹಲ್ವಾ ನೀಡಲಾಗಿದೆ. ರಾಜಮಾತೆ ಪ್ರಮೋದಾ ದೇವಿಯವರು (Pramoda Devi) ಮೈಸೂರು ಪಾಕನ್ನು ಸಹ ಪ್ರಧಾನಿಗಳಿಗೆ ನೀಡಲಾಗುವುದು ಅಂತ ಹೇಳಿದ್ದರು. ಅದನ್ನು ಅವರಿ ತಿಂದರೋ ಇಲ್ಲವೋ ಅಂತ ಗೊತ್ತಾಗಿಲ್ಲ ಮಾರಾಯ್ರೇ.

ತಿಂಡಿ ಸೇವಿಸಿದ ಬಳಿಕ ಪ್ರಧಾನಿ ಒಡೆಯರ್ ಕುಟುಂಬದ ಸದಸ್ಯರ ಜೊತೆ ಪೋಟೋಗಳನ್ನು ತೆಗೆಸಿಕೊಂಡರು. ರಾಜ್ಯಪಾಲ ಟಿ ಸಿ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅವರೊಂದಿಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
Web contact

TV9 Kannada

Read More