PM Modi in Mysuru: ಸೆಲ್ಫೀಗಾಗಿ ಮುಗಿಬಿದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ನಿರಾಶೆಗೊಳಿಸಲಿಲ್ಲ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2022 | 12:01 PM

ಯೋಗ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಅಲ್ಲಿದ್ದ ಜನ ಅವರೊಂದಿಗೆ ಸೆಲ್ಫೀಗಾಗಿ ನಾ ಮುಂದು ತಾಮುಂದು ಅಂತ ಮುಗಿಬಿದ್ದರು. ಪ್ರಧಾನಿಗಳು ಬೇಸರಗೊಳ್ಳದೆ ಎಲ್ಲರಿಗೂ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ನೀಡಿದರು.

ಮೈಸೂರು:  ಅಂತರರಾಷ್ಟ್ರೀಯ ಯೋಗ ದಿನವಾಗಿದ್ದ (International Yoga Day) ಮಂಗಳವಾರ ರಾಜ್ಯದ ಸಾಂಸ್ಕೃತಿಕ ರಾಜಧಾನಿ (cultural capital) ಮೈಸೂರಿನ ಭವ್ಯ ಅರಮನೆ (Mysuru Palace) ಮೈದಾನದಲ್ಲಿ ಪ್ರಧಾನ ನರೇಂದ್ರ ಮೋದಿ ಅವರು ಸುಮಾರು 15,000 ಕ್ಕೂ ಹೆಚ್ಚು ಯೋಗಾಸಕ್ತರು ಮತ್ತು ಯೋಗಪಟುಗಳೊಂದಿಗೆ ಯೋಗ ಕಾರ್ಯಕ್ರಮಲ್ಲಿ ಪಾಲ್ಗೊಂಡು ಪ್ರತಿಯೊಂದು ಆಸನವನ್ನು ಲೀಲಾಜಾಲವಾಗಿ ಮಾಡಿದರು. ಅವರ ಜನಪ್ರಿಯತೆ ಬಗ್ಗೆ ಯಾರೇನೂ ಹೇಳಬೇಕಿಲ್ಲ. ಈ ವಿಡಿಯೋ ನೋಡಿ. ಯೋಗ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಅಲ್ಲಿದ್ದ ಜನ ಅವರೊಂದಿಗೆ ಸೆಲ್ಫೀಗಾಗಿ ನಾ ಮುಂದು ತಾಮುಂದು ಅಂತ ಮುಗಿಬಿದ್ದರು. ಪ್ರಧಾನಿಗಳು ಬೇಸರಗೊಳ್ಳದೆ ಎಲ್ಲರಿಗೂ ಸೆಲ್ಫೀ ತೆಗೆದುಕೊಳ್ಳುವ ಅವಕಾಶ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.