Video: ಮನ್ ಕಿ ಬಾತ್ ಎಂಬುದು ಪ್ರಧಾನಿ ಮೋದಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ
ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕೇಳಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ, ಇನ್ನೇನು ಹೊಸ ವಿಷಯಗಳ ಕುರಿತು ಚರ್ಚೆ ನಡೆಸಬಹುದು ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿರುತ್ತದೆ. ಪ್ರಧಾನಿ ಮೋದಿ ನನ್ನ ಪ್ರೀತಿಯ ದೇಶ ವಾಸಿಗಳೇ ನಮಸ್ಕಾರ ಎನ್ನುವ ಶುಭಾಶಯದೊಂದಿಗೆ ಪ್ರತಿ ತಿಂಗಳು ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಈ ಕಾರ್ಯಕ್ರಮವು ಕೇವಲ ಒಬ್ಬ ವ್ಯಕ್ತಿಯ ಮಾತಾಗದೆ, ನಾನು ಎಂಬುವುದಕ್ಕಿಂತ ನಾವು ಎನ್ನುವ ಸಾಮೂಹಿಕತೆಯ ಶಕ್ತಿಯನ್ನು ಸಾರುತ್ತದೆ.
ನವದೆಹಲಿ, ಡಿಸೆಂಬರ್ 23: ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕೇಳಲು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ, ಇನ್ನೇನು ಹೊಸ ವಿಷಯಗಳ ಕುರಿತು ಚರ್ಚೆ ನಡೆಸಬಹುದು ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿರುತ್ತದೆ. ಪ್ರಧಾನಿ ಮೋದಿ ನನ್ನ ಪ್ರೀತಿಯ ದೇಶ ವಾಸಿಗಳೇ ನಮಸ್ಕಾರ ಎನ್ನುವ ಶುಭಾಶಯದೊಂದಿಗೆ ಪ್ರತಿ ತಿಂಗಳು ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಈ ಕಾರ್ಯಕ್ರಮವು ಕೇವಲ ಒಬ್ಬ ವ್ಯಕ್ತಿಯ ಮಾತಾಗದೆ, ನಾನು ಎಂಬುವುದಕ್ಕಿಂತ ನಾವು ಎನ್ನುವ ಸಾಮೂಹಿಕತೆಯ ಶಕ್ತಿಯನ್ನು ಸಾರುತ್ತದೆ.
ಮನ್ ಕಿ ಬಾತ್ ಕೋಟಿಗಟ್ಟಲೆ ಹೃದಯಗಳನ್ನು ಒಂದುಗೂಡಿಸಿ, ದೇಶದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಹೊರಹೊಮ್ಮುತ್ತಿರುವ ನವೀನ ಆಲೋಚನೆಗಳ ಬಗ್ಗೆ ಚರ್ಚಿಸುತ್ತದೆ. ಸಮಾಜವನ್ನು ಬದಲಾಯಿಸಲು ಶ್ರಮಿಸುತ್ತಿರುವ ಹೀರೋಗಳ ಕಥೆಗಳನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಭಾಷೆ, ಸಂಪ್ರದಾಯ, ವಿಜ್ಞಾನ, ಪರಂಪರೆ, ವಿದೇಶದಲ್ಲಿ ಭಾರತೀಯ ಸಂಸ್ಕೃತಿ, ಅನ್ನದಾತನ ಶ್ರಮ, ನಾರಿಶಕ್ತಿ, ಕ್ರೀಡೆ, ಯುವಕರ ಆಕಾಂಕ್ಷೆ, ಪರಿಸರ ಸಂರಕ್ಷಣೆ, ಯೋಗ, ಆಯುರ್ವೇದ ಮತ್ತು ಸ್ವಚ್ಛತೆಯಂತಹ ವೈವಿಧ್ಯಮಯ ವಿಷಯಗಳನ್ನು ಈ ಕಾರ್ಯಕ್ರಮ ಒಳಗೊಂಡಿದೆ.
ಇದು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ, ದೇಶವನ್ನು ಅಭಿವೃದ್ಧಿಪಡಿಸುವ ಮತ್ತು ವಿಶ್ವ ಬಂಧು ಭಾರತದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ. ಮನ್ ಕಿ ಬಾತ್ ಕೇವಲ ಒಂದು ರೇಡಿಯೋ ಕಾರ್ಯಕ್ರಮವಲ್ಲ, ಇದು ರಾಷ್ಟ್ರ ಮೊದಲು ಎಂಬ ಭಾವನೆಯನ್ನು ಬಿಂಬಿಸುವ ಒಂದು ನಂಬಿಕೆ, ಪೂಜೆ ಮತ್ತು ವ್ರತವಾಗಿದೆ. ಡಿಸೆಂಬರ್ 28, 2025 ರಂದು ಪ್ರಸಾರವಾಗುವ ಈ ಸಂಚಿಕೆಯು ಹೊಸ ಭಾರತದ ಆಶಯಗಳನ್ನು ಮತ್ತೊಮ್ಮೆ ಜನರೊಂದಿಗೆ ಹಂಚಿಕೊಳ್ಳಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ