ಒಬ್ಬ ತಾಯಿಯಂತೆ ಅದಾನಿಯನ್ನು ಪೋಷಿಸಿ ಬೆಳೆಸಿದ್ದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ: ಪ್ರೊಫೆಸರ್ ಬಿಕೆ ಚಂದ್ರಶೇಖರ್

|

Updated on: Feb 04, 2023 | 4:25 PM

2001 ರಲ್ಲಿ ಗುಜರಾತಿನ ಪ್ರದೇಶವೊಂದರಲ್ಲಿ ಜಮೀನಿನ ಬೆಲೆ ಪ್ರತಿ ಚದರ ಮೀಟರ್ ಗೆ ರೂ. 10,000 ಇದ್ದಾಗ ಆಗ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಪ್ರತಿ ಚ ಮೀಗೆ ಕೇವಲ ರೂ. 900 ಯಂತೆ ಅದಾನಿಗೆ ನೀಡಿದ್ದರು ಎಂದು ಪ್ರೊಫೆಸರ್ ಹೇಳಿದರು.

ಬೆಂಗಳೂರು: ಆರ್ಥಿಕ ತಜ್ಞ ಮತ್ತು ಮಾಜಿ ಕೇಂದ್ರ ಸಚಿವ ಪ್ರೊಫೆಸರ್ ಬಿಕೆ ಚಂದ್ರಶೇಖರ್ (Prof. BK Chandrashekhar) ಅವರು ಬಹಳ ದಿನಗಳ ಸುದ್ದಿಗೋಷ್ಟಿಯೊಂದರಲ್ಲಿ ಮಾತಾಡಿದ್ದಾರೆ. ಶನಿವಾರ ಬೆಂಗಳೂರಲ್ಲಿ ಮಾತಾಡಿದ ಚಂದ್ರಶೇಖರ್ ಅವರು ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಹುಟ್ಟುವಂತೆ ಮಾಡಿರುವ ಉದ್ಯಮಿ ಗೌತಮ್ ಅದಾನಿಯನ್ನು (Goutam Adani) ಒಬ್ಬ ತಾಯಿಯಂತೆ ಪೋಷಿಸಿ, ಕೇಳಿದ್ದನ್ನೆಲ್ಲ ನೀಡಿ ಬೆಳೆಸಿದ್ದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅಂತ ಹೇಳಿದರು. ಉದ್ಯಮ ಅಥವಾ ಉದ್ಯಮಿಯನ್ನು ಬೆಳೆಸುವುದು ತಪ್ಪಲ್ಲ, ಆದರೆ ಬೇರೆಯವರಿಗಿಂತ ಹೆಚ್ಚು ಪ್ರಾಶಸ್ತ್ಯ ನೀಡಿ ಕೇಳಿದ್ದನ್ನೆಲ್ಲ ನೀಡುವುದು, ತೆರಿಗೆ ವಿನಾಯಿತಿ ನೀಡುವುದು, ಜಮೀನನ್ನು ಅತಿ ಕಡಿಮೆ ಬೆಲೆಗೆ ಕೊಡೋದು ಸರಿಯಲ್ಲ ಎಂದು ಪ್ರೊಫೆಸರ್ ಹೇಳಿದರು. 2001 ರಲ್ಲಿ ಗುಜರಾತಿನ ಪ್ರದೇಶವೊಂದರಲ್ಲಿ ಜಮೀನಿನ ಬೆಲೆ ಪ್ರತಿ ಚದರ ಮೀಟರ್ ಗೆ ರೂ. 10,000 ಇದ್ದಾಗ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಪ್ರತಿ ಚದರ ಮೀಟರ್ ಗೆ ಕೇವಲ ರೂ. 900 ಯಂತೆ ಅದಾನಿಗೆ ನೀಡಿದ್ದರು ಎಂದು ಪ್ರೊಫೆಸರ್ ಬಿಕೆ ಚಂದ್ರಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 04, 2023 04:25 PM