ಧನ್ಯಾ ರಾಮ್​ಕುಮಾರ್​ ನಟನೆಯ ‘ಕಾಲಾಪತ್ಥರ್’​ ಸಾಂಗ್​ ಕೇಳಿ ತಾಯಿ ಪೂರ್ಣಿಮಾ ಹೇಳಿದ್ದೇನು?

Updated on: Oct 11, 2023 | 8:10 PM

‘ಕಾಲಾಪತ್ಥರ್’​ ಸಿನಿಮಾದ ಲಿರಿಕಲ್​ ವಿಡಿಯೋವನ್ನು ಬುಧವಾರ (ಅ.11) ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧನ್ಯಾ ರಾಮ್​ಕುಮಾರ್​ ಅವರ ತಾಯಿ ಪೂರ್ಣಿಮಾ, ಹಿರಿಯ ನಟಿ ತಾರಾ, ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರು ಆಗಮಿಸಿ ಶುಭ ಕೋರಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಡಾ. ರಾಜ್​ಕುಮಾರ್​ (Dr Rajkumar) ಕುಟುಂಬದ ಕುಡಿ ಧನ್ಯಾ ರಾಮ್​ಕುಮಾರ್​ (Dhanya Ramkumar) ಅವರು ‘ಕಾಲಾಪತ್ಥರ್​’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬುಧವಾರ (ಅ.11) ಈ ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧನ್ಯಾ ರಾಮ್​ಕುಮಾರ್​ ಅವರ ತಾಯಿ ಪೂರ್ಣಿಮಾ, ಹಿರಿಯ ನಟಿ ತಾರಾ, ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರು ಆಗಮಿಸಿ ಶುಭ ಕೋರಿದರು. ಮಗಳ ಸಿನಿಮಾದ ಬಗ್ಗೆ ಪೂರ್ಣಿಮಾ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ‘ಈ ಸೌಂಡ್​ ಕೇಳಿದ ಮೇಲೆ ನನಗೆ ಅನಿಸುತ್ತಿರುವುದು ಒಂದೇ. ಧನ್ಯನಿಗೆ ಈ ಸಿನಿಮಾದಲ್ಲಿ ಚಾನ್ಸ್​ ಸಿಕ್ಕಿದ್ದು ಅವಳ ಭಾಗ್ಯ. ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾದ ನಿರ್ಮಾಪಕರು ಹಾಗೂ ಇಡೀ ತಂಡಕ್ಕೆ ಒಳ್ಳೆಯ ಭವಿಷ್ಯ ಸಿಗಲಿ’ ಎಂದು ಪೂರ್ಣಿಮಾ (Poornima) ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More