ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್

Updated on: Jan 02, 2026 | 3:54 PM

ಪ್ರಮೋದ್ ಮುತಾಲಿಕ್ ಅವರು ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾಗಳಿಗೆ ಕಾಂಗ್ರೆಸ್‌ನವರು ಮನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜಮೀರ್ ಅಹಮದ್ ಅವರು ಮನೆ ನೀಡುವುದಾಗಿ ಹೇಳಿದ್ದು, ಸ್ಥಳೀಯರು ಮನೆಗಾಗಿ ವರ್ಷಗಟ್ಟಲೆ ಕಾಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಜ.2: ಪ್ರಮೋದ್ ಮುತಾಲಿಕ್ ಅವರು ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾ ವಾಸಸ್ಥಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಸಚಿವ ಜಮೀರ್ ಅಹಮದ್ ಅವರು ಈ ಸಮುದಾಯಗಳಿಗೆ ಮನೆಗಳನ್ನು ನೀಡುವ ಪ್ರಸ್ತಾಪವನ್ನು ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. “ಕೋಗಿಲು ನಗರದಲ್ಲಿ ಶುದ್ಧ ಬಾಂಗ್ಲಾದೇಶಿ ಮುಸ್ಲಿಂರ ವಾಸಸ್ಥಾನವಿದೆ. ಅಲ್ಲಿ ರೋಹಿಂಗ್ಯಾಗಳಿದ್ದಾರೆ. ಕಾಂಗ್ರೆಸ್ ನಾಯಕರು ಅವರಿಗೆ ತಕ್ಷಣವೇ ಹೇಗೆ ಸ್ಪಂದಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಜಮೀರ್ ಅಹಮದ್ ಅವರನ್ನು ಎರಡನೆಯ ಟಿಪ್ಪು ಸುಲ್ತಾನ್ ಎಂದು ಮುತಾಲಿಕ್, ಅವರು ಬಾಂಗ್ಲಾದೇಶಿ ಮುಸ್ಲಿಮರಿಗೆ ಮನೆ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಥಳೀಯರು ಮನೆಗಳಿಲ್ಲದೆ ಏಳರಿಂದ ಎಂಟು ವರ್ಷಗಳಿಂದ ಚಪ್ಪರದಲ್ಲಿ ಟೆಂಟ್ ಹಾಕಿಕೊಂಡು, ಬಿಸಿಲು ಮಳೆ ಉಪವಾಸದಲ್ಲಿ ಕಳೆಯುತ್ತಿದ್ದಾರೆ. ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ. ಬಾಂಗ್ಲಾದೇಶಿ ಮುಸ್ಲಿಮರಿಗೆ ಮನೆಗಳನ್ನು ನೀಡುವುದು ತಪ್ಪು ಎಂದು ಅವರು ಬಣ್ಣಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ತಮ್ಮ ಸಂಘಟನೆ ನಿರ್ಧರಿಸಿದೆ ಎಂದು ಮುತಾಲಿಕ್ ಘೋಷಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ