‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಪಡುತ್ತಿರುವ ಕಷ್ಟ ನನಗೆ ಗೊತ್ತು’

Updated on: Oct 29, 2026 | 2:55 PM

ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದ್ದು, ಇದೀಗ ದರ್ಶನ್ ಕುಟುಂಬಕ್ಕೆ ಆಪ್ತವಾಗಿರುವ ನಿರ್ದೇಶಕ ಪ್ರೇಮ್ ಅವರು ಈ ಬಗ್ಗೆ ಮಾತನಾಡಿದ್ದು, ‘ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅನ್ನು ಹೊರಗೆ ಕರೆದುಕೊಂಡು ಬರಲು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತು, ಅವರ ಬಗ್ಗೆ ಹಾಗೆಲ್ಲ ಮಾತನಾಡುವುದು ದೊಡ್ಡ ತಪ್ಪು’ ಎಂದಿದ್ದಾರೆ. ಪ್ರೇಮ್ ಹೇಳಿರುವುದೇನು? ವಿಡಿಯೋ ನೋಡಿ...

ವಿಜಯಲಕ್ಷ್ಮಿ ದರ್ಶನ್ ಮತ್ತು ಧನ್ವೀರ್ ನಡುವೆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಧನ್ವೀರ್ ಅವರು, ವಿಜಯಲಕ್ಷ್ಮಿ ಅವರ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತುಗಳ ಆಡಿಯೋ ವೈರಲ್ ಆಗಿದ್ದು, ‘ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅವರನ್ನು ಹೊರಗೆ ಕರೆದುಕೊಂಡು ಬರಲು ಇಷ್ಟವೇ ಇಲ್ಲ. ಅವರು ಬಹಳ ಫೇಕು’ ಎಂದೆಲ್ಲ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದ್ದು, ಇದೀಗ ದರ್ಶನ್ ಕುಟುಂಬಕ್ಕೆ ಆಪ್ತವಾಗಿರುವ ನಿರ್ದೇಶಕ ಪ್ರೇಮ್ ಅವರು ಈ ಬಗ್ಗೆ ಮಾತನಾಡಿದ್ದು, ‘ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅನ್ನು ಹೊರಗೆ ಕರೆದುಕೊಂಡು ಬರಲು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತು, ಅವರ ಬಗ್ಗೆ ಹಾಗೆಲ್ಲ ಮಾತನಾಡುವುದು ದೊಡ್ಡ ತಪ್ಪು’ ಎಂದಿದ್ದಾರೆ. ಪ್ರೇಮ್ ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Oct 29, 2026 02:28 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More