Kichcha Sudeep: ಎಂ.ಎನ್. ಕುಮಾರ್ಗೆ ಸುದೀಪ್ ಲೀಗಲ್ ನೋಟೀಸ್; ಇಲ್ಲಿದೆ ನಿರ್ಮಾಪಕರ ರಿಯಾಕ್ಷನ್
N Kumar: ವಾಟ್ಸಪ್ ಮೂಲಕ ನೋಟೀಸ್ ಬಂದಿದೆ. ಆದರೆ ಅಂಚೆ ಮೂಲಕ ಬಂದಿಲ್ಲ ಎಂದು ಎಂ.ಎನ್. ಕುಮಾರ್ ಹೇಳಿದ್ದಾರೆ. ತಮ್ಮ ಮುಂದಿನ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರು ಅಡ್ವಾನ್ಸ್ ಹಣ ಪಡೆದುಕೊಂಡು ಕಾಲ್ಶೀಟ್ ನೀಡುತ್ತಿಲ್ಲ ಎಂದು ನಿರ್ಮಾಪಕ ಎಂ.ಎನ್. ಕುಮಾರ್ (MN Kumar) ಅವರು ಆರೋಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸುದೀಪ್ ಅವರು ಲೀಗಲ್ ನೋಟೀಸ್ ಕಳಿಸಿದ್ದಾರೆ. ಎಂ.ಎನ್. ಕುಮಾರ್ ಅವರಿಗೆ ವಾಟ್ಸಪ್ ಮೂಲಕ ನೋಟೀಸ್ (Legal Notice) ತಲುಪಿದೆ. ಆದರೆ ಅಧಿಕೃತವಾಗಿ ಅಂಚೆ ಮೂಲಕ ನೋಟೀಸ್ ಬಂದಿಲ್ಲ. ‘ನೋಟೀಸ್ ಬಂದರೆ ಅದನ್ನು ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ನೀಡುತ್ತೇನೆ. ಅವರು ಸಭೆ ಮಾಡುತ್ತಾರೆ. ಅವರು ಹೇಳುವ ತೀರ್ಮಾನಕ್ಕೆ ನಾನು ಬದ್ಧನಾಗಿ ಇರುತ್ತೇನೆ’ ಎಂದು ಎಂ.ಎನ್.ಕುಮಾರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.