Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

Updated on: Dec 15, 2025 | 8:10 AM

ಮುಂಬೈ ಇರಲಿ, ದೆಹಲಿ ಇರಲಿ, ಬೆಂಗಳೂರಿರಲಿ ರಸ್ತೆಯನ್ನು ಬಿಟ್ಟು ಫುಟ್ಪಾತ್​ ಮೇಲೆ ಬೈಕ್ ಚಲಾಯಿಸುವವರೇ ಹೆಚ್ಚು. ಯಾರೇನೇ ಅಂದರೂ ಕ್ಯಾರೇ ಎನ್ನದೆ ತಮ್ಮ ಪಾಡಿಗೆ ಹೋಗುವುದಲ್ಲದೆ ಹಿಂದಿನಿಂದ ಹಾರ್ನ್ ಮಾಡಿ ಪಾದಚಾರಿಗಳಿಗೆ ತೊಂದರೆ ಕೊಡುವುದಂತೂ ಮತ್ತಷ್ಟು ಕೋಪ ತರಿಸುತ್ತದೆ. ಪುಣೆಯಲ್ಲಿ ಮಹಿಳೆಯೊಬ್ಬರು ಫುಟ್ಪಾತ್​ ಮೇಲೆ ಗಾಡಿ ಚಲಾಯಿಸಿಕೊಂಡು ಬರುವವರಿಗೆಲ್ಲರಿಗೂ ಆರತಿ ಎತ್ತಿರುವ ವಿಡಿಯೋ ವೈರಲ್ ಆಗಿದೆ. ಪುಣೆಯ ಅನೇಕ ಭಾಗಗಳಲ್ಲಿ ರಾಂಗ್ ಸೈಡ್​ನಲ್ಲಿ ವಾಹನ ಚಲಾಯಿಸುವುದು, ಸಿಗ್ನಲ್‌ಗಳನ್ನು ನಿರ್ಲಕ್ಷಿಸುವುದು, ಅಕ್ರಮವಾಗಿ ವಾಹನ ನಿಲುಗಡೆ ಮಾಡುವುದು ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಮುಂಬೈ,ಡಿಸೆಂಬರ್ 15: ಮುಂಬೈ ಇರಲಿ, ದೆಹಲಿ ಇರಲಿ, ಬೆಂಗಳೂರಿರಲಿ ರಸ್ತೆಯನ್ನು ಬಿಟ್ಟು ಫುಟ್ಪಾತ್​ ಮೇಲೆ ಬೈಕ್ ಚಲಾಯಿಸುವವರೇ ಹೆಚ್ಚು. ಯಾರೇನೇ ಅಂದರೂ ಕ್ಯಾರೇ ಎನ್ನದೆ ತಮ್ಮ ಪಾಡಿಗೆ ಹೋಗುವುದಲ್ಲದೆ ಹಿಂದಿನಿಂದ ಹಾರ್ನ್ ಮಾಡಿ ಪಾದಚಾರಿಗಳಿಗೆ ತೊಂದರೆ ಕೊಡುವುದಂತೂ ಮತ್ತಷ್ಟು ಕೋಪ ತರಿಸುತ್ತದೆ. ಪುಣೆಯಲ್ಲಿ ಮಹಿಳೆಯೊಬ್ಬರು ಫುಟ್ಪಾತ್​ ಮೇಲೆ ಗಾಡಿ ಚಲಾಯಿಸಿಕೊಂಡು ಬರುವವರಿಗೆಲ್ಲರಿಗೂ ಆರತಿ ಎತ್ತಿರುವ ವಿಡಿಯೋ ವೈರಲ್ ಆಗಿದೆ. ಪುಣೆಯ ಅನೇಕ ಭಾಗಗಳಲ್ಲಿ ರಾಂಗ್ ಸೈಡ್​ನಲ್ಲಿ ವಾಹನ ಚಲಾಯಿಸುವುದು, ಸಿಗ್ನಲ್‌ಗಳನ್ನು ನಿರ್ಲಕ್ಷಿಸುವುದು, ಅಕ್ರಮವಾಗಿ ವಾಹನ ನಿಲುಗಡೆ ಮಾಡುವುದು ಮತ್ತು ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಪಾದಚಾರಿ ಮಾರ್ಗಗಳನ್ನು ಬಳಸುವ ದ್ವಿಚಕ್ರ ವಾಹನ ಸವಾರರ ಸಂಖ್ಯೆ ಹೆಚ್ಚುತ್ತಿರುವುದು ಒಂದು ದೊಡ್ಡ ತಲೆನೋವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More