ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಪ್ರಧಾನಿ ಮೋದಿ

Updated on: Dec 05, 2025 | 12:52 PM

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಪುಟಿನ್ ಬಳಿ ಪ್ರಧಾನಿ ಮೋದಿ ಭರವಸೆಯ ಮಾತುಗಳನ್ನಾಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದಾರೆ. ಇಂದು ಹೈದರಾಬಾದ್ ಹೌಸ್​ನಲ್ಲಿ ಪ್ರಧಾನಿ ಮೋದಿಯವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಮಯದಲ್ಲಿ ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸಿ, ಭಾರತ ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಶಾಂತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು.

ನವದೆಹಲಿ, ಡಿಸೆಂಬರ್ 05: ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಪುಟಿನ್ ಬಳಿ ಪ್ರಧಾನಿ ಮೋದಿ ಭರವಸೆಯ ಮಾತುಗಳನ್ನಾಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಆಗಮಿಸಿದ್ದಾರೆ. ಇಂದು ಹೈದರಾಬಾದ್ ಹೌಸ್​ನಲ್ಲಿ ಪ್ರಧಾನಿ ಮೋದಿಯವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಈ ಸಮಯದಲ್ಲಿ ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸಿ, ಭಾರತ ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಶಾಂತಿಯ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದರು.

ಉಕ್ರೇನ್ ಬಿಕ್ಕಟ್ಟು ಆರಂಭವಾದಾಗಿನಿಂದ ನಾವು ನಿರಂತರ ಚರ್ಚೆ ನಡೆಸಿದ್ದೇವೆ. ಕಾಲಕಾಲಕ್ಕೆ, ನೀವು ಕೂಡ, ನಿಜವಾದ ಸ್ನೇಹಿತರಾಗಿ, ಎಲ್ಲದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದೀರಿ.

ನಂಬಿಕೆ ಒಂದು ದೊಡ್ಡ ಶಕ್ತಿ ಎಂದು ನಾನು ನಂಬುತ್ತೇನೆ, ಮತ್ತು ನಾನು ಈ ವಿಷಯವನ್ನು ನಿಮ್ಮೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ ಮತ್ತು ಅದನ್ನು ಪ್ರಪಂಚದ ಮುಂದೆ ಇರಿಸಿದ್ದೇನೆ. ರಾಷ್ಟ್ರಗಳ ಕಲ್ಯಾಣವು ಶಾಂತಿಯ ಹಾದಿಯಲ್ಲಿದೆ. ಒಟ್ಟಾಗಿ, ನಾವು ಜಗತ್ತನ್ನು ಆ ಹಾದಿಯತ್ತ ಕೊಂಡೊಯ್ಯುತ್ತೇವೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳೊಂದಿಗೆ, ಜಗತ್ತು ಮತ್ತೊಮ್ಮೆ ಶಾಂತಿಯ ದಿಕ್ಕಿಗೆ ಮರಳುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ