Video: ಬಾಲಕಿಯ ಅಪಹರಿಸಿ, ಅತ್ಯಾಚಾರ ನಡೆಸಲು ವ್ಯಕ್ತಿಯ ಯತ್ನ, ಬಾಲಕನ ಸಮಯಪ್ರಜ್ಞೆಯಿಂದ ಉಳೀತು ಆಕೆಯ ಜೀವ

Updated on: Jun 01, 2026 | 12:06 PM

ರಷ್ಯಾದಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕಿರುಚುತ್ತಿದ್ದ 5 ವರ್ಷದ ಪುಟ್ಟ ಹೆಣ್ಣು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಕಟ್ಟಡದ ಒಳಗೆ ಹೋಗಿ ಅಪಹರಿಸಲು ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಸಣ್ಣ ಬಾಲಕನೊಬ್ಬ ತಕ್ಷಣವೇ ಎಚ್ಚೆತ್ತುಕೊಂಡು, ಕಟ್ಟಡದ ಮುಖ್ಯ ಬಾಗಿಲು ಮುಚ್ಚದಂತೆ ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿ ಇತರರ ಸಹಾಯ ಬೇಡಿದ್ದಾನೆ. ಬಾಲಕನ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಹರಣಕಾರನ ಸಂಚು ವಿಫಲಗೊಂಡಿದ್ದು, ಮಗು ಸುರಕ್ಷಿತವಾಗಿ ಪಾರಾಗಿದೆ. ಸಾರ್ವಜನಿಕರ ಸಹಾಯದಿಂದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಧೈರ್ಯ ತೋರಿದ ಆ ಪುಟ್ಟ ಬಾಲಕನ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ರಷ್ಯಾ, ಜೂನ್ 01: ರಷ್ಯಾದಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಕಿರುಚುತ್ತಿದ್ದ 5 ವರ್ಷದ ಪುಟ್ಟ ಹೆಣ್ಣು ಮಗಳನ್ನು ಬಲವಂತವಾಗಿ ಎತ್ತಿಕೊಂಡು ಕಟ್ಟಡದ ಒಳಗೆ ಹೋಗಲು ಯತ್ನಿಸಿದ್ದಾನೆ. ಆದರೆ ಅಲ್ಲಿಯೇ ಇದ್ದ ಸಣ್ಣ ಬಾಲಕನೊಬ್ಬ ತಕ್ಷಣವೇ ಎಚ್ಚೆತ್ತುಕೊಂಡು, ಕಟ್ಟಡದ ಮುಖ್ಯ ಬಾಗಿಲು ಮುಚ್ಚದಂತೆ ಗಟ್ಟಿಯಾಗಿ ಹಿಡಿದುಕೊಂಡು ಜೋರಾಗಿ ಕೂಗಿ ಇತರರ ಸಹಾಯ ಬೇಡಿದ್ದಾನೆ. ಬಾಲಕನ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಅಪಹರಣಕಾರನ ಸಂಚು ವಿಫಲಗೊಂಡಿದ್ದು, ಮಗು ಸುರಕ್ಷಿತವಾಗಿ ಪಾರಾಗಿದೆ. ಸಾರ್ವಜನಿಕರ ಸಹಾಯದಿಂದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಧೈರ್ಯ ತೋರಿದ ಆ ಪುಟ್ಟ ಬಾಲಕನ ಸಾಹಸಕ್ಕೆ ಜಗತ್ತಿನಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More