ಫೋಟೋಶೂಟ್ ವೇಳೆ ಜಾರಿದ ರಚಿತಾ ರಾಮ್; ಇಲ್ಲಿದೆ ವಿಡಿಯೋ

Updated on: Aug 06, 2023 | 3:36 PM

‘ಸಂಜು ವೆಡ್ಸ್ ಗೀತಾ​ 2’ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್​​ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ.

ನಟಿ ರಚಿತಾ ರಾಮ್​ಗೆ (Rachita Ram) ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಅವರು ‘ಸಂಜು ವೆಡ್ಸ್ ಗೀತಾ​ 2’ (Sanju Weds Geetha 2) ಚಿತ್ರದಲ್ಲಿ ಶ್ರೀಗರ ಕಿಟ್ಟಿಗೆ ಜೊತೆಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್​​ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ. ಅಲ್ಲಿದ್ದವರು ರಚಿತಾನ ಹಿಡಿದುಕೊಂಡಿದ್ದಾರೆ. ರಚಿತಾ ಜೊತೆ ಶ್ರೀನಗರ ಕಿಟ್ಟಿ ಕೂಡ ಭಾಗಿ ಆಗಿದ್ದಾರೆ.  ನಾಗಶೇಖರ್ ‘ಸಂಜು ವೆಡ್ಸ್ ಗೀತ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸೀಕ್ವೆಲ್​ಗೂ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Aug 06, 2023 02:13 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More