ಸ್ಪಂದನಾ ಸಾವಿಗೆ ಮರುಗಿದ ರಾಧಿಕಾ ಕುಮಾರಸ್ವಾಮಿ, ವಿಜಯ್ ರಾಘವೇಂದ್ರರ ಸಂತೈಸಿದ್ದು ಹೀಗೆ

Updated on: Aug 09, 2023 | 10:07 PM

Radhika Kumaraswamy: ಪತ್ನಿ ಸ್ಪಂದನಾರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರುವ ವಿಜಯ್ ರಾಘವೇಂದ್ರ ಅವರನ್ನು ನಟಿ ರಾಧಿಕಾ ಕುಮಾರಸ್ವಾಮಿ ಸಂತೈಸಿದ್ದು ಹೀಗೆ...

ಪತ್ನಿ ಸ್ಪಂದನಾರನ್ನು (Spandana) ಕಳೆದುಕೊಂಡಿರುವ ವಿಜಯ್ ರಾಘವೇಂದ್ರ (Vijay Raghavendra) ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಹರಿಶ್ಚಂದ್ರ ಘಾಟ್​ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರ ನೆರವೇರಿದೆ. ಅದಕ್ಕೂ ಮುನ್ನ ಚಿತ್ರರಂಗದ ಹಲವಾರು ಗಣ್ಯರು, ಸ್ಪಂದನಾರ ಅಂತಿಮ ದರ್ಶನವನ್ನು ಇಂದು ಪಡೆದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿದ ಮೊದಲ ಸಿನಿಮಾದ ನಾಯಕಿ ರಾಧಿಕಾ ಕುಮಾರಸ್ವಾಮಿ ಸಹ ಆಗಮಿಸಿ ಸ್ಪಂದನಾರ ಅಂತಿಮ ದರ್ಶನ ಪಡೆದಿದ್ದಲ್ಲದೆ ವಿಜಯ್ ರಾಘವೇಂದ್ರ ಅವರ ಕೈಹಿಡಿದು ಸಂತೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More