ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಬೈಕ್​​ನಲ್ಲಿ ಹೊರಟ ರಾಹುಲ್​ ಗಾಂಧಿ: ಡೆಲಿವರಿ ಬಾಯ್ ಜೊತೆ ಸಂವಾದ

|

Updated on: May 07, 2023 | 3:56 PM

ಕಾಂಗ್ರೆಸ್​​ ನಾಯಕರು ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ನಗರದಲ್ಲಿ ಇಂದು ಸಂಜೆ ರೋಡ್​ಶೋ ನಡೆಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಸ್ಕೂಟರ್​ನಲ್ಲಿ ಡೆಲಿವರಿ ಬಾಯ್ ಜೊತೆಗೆ ರಾಹುಲ್​ ಗಾಂಧಿ ಸಂಚಾರ ಮಾಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್​​ ನಾಯಕರು ರಾಹುಲ್​ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ ಅವರು ನಗರದಲ್ಲಿ ಇಂದು ಸಂಜೆ ರೋಡ್​ಶೋ ನಡೆಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಸ್ಕೂಟರ್​ನಲ್ಲಿ ಡೆಲಿವರಿ ಬಾಯ್ ಜೊತೆಗೆ ರಾಹುಲ್​ ಗಾಂಧಿ ಸಂಚಾರ ಮಾಡಿದ್ದಾರೆ. ಏರ್​ಲೈನ್ಸ್ ಹೊಟೇಲ್​ನಿಂದ ಶಾಂಗ್ರಿಲಾ ಹೊಟೇಲ್ ತನಕ ರಾಹುಲ್​ ಗಾಂಧಿ ಸಾಗಿದ್ದು, ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಬೈಕ್​​ನಲ್ಲಿ ಓಡಾಟ ಮಾಡಿದ್ದಾರೆ. ಸವಾರನ ಜೊತೆಗೆ ಹಿಂಬದಿ ಕುಳಿತು ಮಾತುಕತೆ ಮಾಡುತ್ತ ರಾಹುಲ್ ಗಾಂಧಿ ಸಾಗಿದ್ದಾರೆ. ಇಂದು ರಾಹುಲ್ ಗಾಂಧಿ ಬೆಂಗಳೂರಿನ ಏರ್ಲೈನ್ಸ್ ಹೋಟೆಲ್​ಗೆ ಬಂದಿದ್ದ ವೇಳೆ ಡೆಲಿವರಿ ಬೈಕ್​ನಲ್ಲಿ ಬಂದಿದ್ದ. ಈ ವೇಳೆ ರಾಹುಲ್ ಗಾಂಧಿ ಭದ್ರತಾ ಪಡೆಯಿಲ್ಲದೆ ಬೈಕ್​ನಲ್ಲಿ ಸಂಚಾರ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us on