Video: ದೂರದಿಂದ ನೋಡೋಕೆ ನೀರಿನ ಸಣ್ಣ ಹೊಂಡವಷ್ಟೇ, ಮಗುವನ್ನೇಬಲಿಪಡೆದಿದ್ಹೇಗೆ ನೋಡಿ

Updated on: Sep 09, 2025 | 9:19 AM

ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ಈ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ.

ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ವಿಡಿಯೋ ಉದಾಹರಣೆ. ಮನೆಯ ಮುಂಭಾಗ ನೀರು ಬೀಳುತ್ತಿದ್ದು, ಬಾಲಕಿಯೊಬ್ಬಳು ಅದನ್ನು ನೋಡುತ್ತಾ ನಿಂತಿದ್ದಾಳೆ, ಹಿಂದಿನಿಂದ ಬಂದ ಮಗುವೊಂದು ಹೊಂಡವನ್ನು ಏನೆಂದು ನೋಡಲು ಹೋಗಿ ಅದರೊಳಗೆ ಬಿದ್ದು ಸಾವನ್ನಪ್ಪಿದೆ. ದೂರದಿಂದ ನೋಡಲು ಅದು ಸಣ್ಣ ಹೊಂಡದಂತೆ ಕಂಡರೂ, ಮಗುವನ್ನು ಬಲಿಪಡೆದಿರುವುದು ಮಾತ್ರ ಸತ್ಯ. ಘಟನೆ ನಡೆದಿದ್ದೆಲ್ಲಿ ಎನ್ನುವ ಮಾಹಿತಿ ಲಭ್ಯವಿಲ್ಲ.  ಮಳೆಗಾಲದಲ್ಲಿ ಮಕ್ಕಳು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ಸ್ವಲ್ಪ ಎಚ್ಚರಿಕೆವಹಿಸುವುದು ಒಳಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 09, 2025 09:16 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More