Video: ಇದು ಜೀಪೋ ಜೇನು ಗೂಡೋ, 16 ಆಸನಗಳ ಜೀಪಿನಲ್ಲಿ 60 ಮಂದಿಯ ಪ್ರಯಾಣ
ಹದಿನಾರು ಆಸನಗಳಿರುವ ಜೀಪಿನಲ್ಲಿ ಬರೋಬ್ಬರಿ ಎಂದರೆ 20 ಮಂದಿ ಪ್ರಯಾಣಿಸಬಹುದು ಆದರೆ ಬರೋಬ್ಬರಿ 60 ಮಂದಿ ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಆನಂದಪುರಿಯಲ್ಲಿ ಈ ಆಘಾತಕಾರಿ ವಿಡಿಯೋ ಚಿತ್ರೀಕರಿಸಲಾಗಿದೆ. 16 ಆಸನಗಳ ಜೀಪಿನಲ್ಲಿ ಸುಮಾರು 60 ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು.
ಬನ್ಸ್ವಾರಾ, ಜನವರಿ 11: ಹದಿನಾರು ಆಸನಗಳಿರುವ ಜೀಪಿನಲ್ಲಿ ಬರೋಬ್ಬರಿ ಎಂದರೆ 20 ಮಂದಿ ಪ್ರಯಾಣಿಸಬಹುದು ಆದರೆ ಬರೋಬ್ಬರಿ 60 ಮಂದಿ ಪ್ರಯಾಣಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಆನಂದಪುರಿಯಲ್ಲಿ ಈ ಆಘಾತಕಾರಿ ವಿಡಿಯೋ ಚಿತ್ರೀಕರಿಸಲಾಗಿದೆ. 16 ಆಸನಗಳ ಜೀಪಿನಲ್ಲಿ ಸುಮಾರು 60 ಪ್ರಯಾಣಿಕರು ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ವಾಹನದೊಳಗಿನ ಎಲ್ಲಾ ಆಸನಗಳು ಭರ್ತಿಯಾಗಿದ್ದವು, ಆದರೆ ಹಲವಾರು ಪ್ರಯಾಣಿಕರು ಹೊರಗೆ ಬಾನೆಟ್, ಛಾವಣಿ ಸಾಲನೆ ಚಾಲಕನ ಬಾಗಿಲಿನ ಮೇಲೂ ನೇತಾಡುತ್ತಿರುವುದನ್ನು ಕಾಣಬಹುದು. ಈ ಅಪಾಯಕಾರಿ ಪ್ರಯಾಣದಲ್ಲಿ ವೃದ್ಧರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡಾ ಇರುವುದು ಆತಂಕ ಮೂಡಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ