ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್

Updated on: Dec 25, 2024 | 3:24 PM

ಈ ವಾರ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್​ ಶೈಲಿಯ ಟಾಸ್ಕ್​ ನೀಡಲಾಗಿದೆ. ಮೊದಲು ರಜತ್ ಅವರು ರೆಸಾರ್ಟ್​ ಸಿಬ್ಬಂದಿಗಳ ತಂಡದಲ್ಲಿ ಇದ್ದರು. ಆದರೆ ಈಗ ಆಟ ಬದಲಾಗಿದೆ. ಅವರ ತಂಡಕ್ಕೆ ಈಗ ಅತಿಥಿಗಳ ಪಟ್ಟ ಸಿಕ್ಕಿದೆ. ಹಾಗಾಗಿ ರಜತ್ ಸಿಕ್ಕಾಪಟ್ಟೆ ಎಗರಾಟ ಶುರು ಮಾಡಿಕೊಂಡಿದ್ದಾರೆ. ಅವರ ಆರ್ಭಟ ನೋಡಿ ಇನ್ನುಳಿದವರಿಗೆ ತಲೆ ನೋವು ಶುರುವಾಗಿದೆ.

ರಜತ್ ಅವರು ಸಿಕ್ಕಾಪಟ್ಟೆ ಕಿರಿಕ್ ಪಾರ್ಟಿ ಎಂಬುದು ಎಲ್ಲರಿಗೂ ಗೊತ್ತು. ಈಗ ಅವರ ಕಿರಿಕ್ ಜಾಸ್ತಿ ಆಗಿದೆ. ಯಾಕೆಂದರೆ. ಬಿಗ್ ಬಾಸ್ ನೀಡಿರುವ ಟಾಸ್ಕ್ ಆ ರೀತಿ ಇದೆ. ‘ನಮ್ಮ ಸರದಿ ಬಂದಾಗ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತೇನೆ’ ಎಂದು ಅವರು ಈ ಮೊದಲೇ ಹೇಳಿದ್ದರು. ಈಗ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಡಿಸೆಂಬರ್​ 25ರ ಸಂಚಿಕೆಯ ಪ್ರೋಮೋ ಇಲ್ಲಿದೆ. ವೈಲ್ಡ್​ ಕಾರ್ಡ್​ ಮೂಲಕ ಬಂದಿರುವ ರಜತ್ ಅವರು ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಹೆಚ್ಚು ಅಬ್ಬರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More