Rajmohan Pillai: 40 ಕೋಟಿ ಸಾಲದಿಂದ 19,000 ಕೋಟಿ ಸಾಮ್ರಾಜ್ಯ ಕಟ್ಟಿದ ಸ್ಪೂರ್ತಿದಾಯಕ ಕಥೆ

Updated on: Aug 27, 2026 | 4:24 PM

ತಂದೆಯ ನಿಧನದ ನಂತರ 40 ಕೋಟಿ ರೂಪಾಯಿ ಸಾಲ ಮತ್ತು ಹಲವು ಕೇಸ್‌ಗಳನ್ನು ಎದುರಿಸಿದ ರಾಜಮೋಹನ್ ಪಿಳ್ಳೈ ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ. 27 ವರ್ಷಗಳ ನಿರಂತರ ಹೋರಾಟದ ಮೂಲಕ ಸಾಲಗಳನ್ನು ತೀರಿಸಿ, ಬೀಟಾ ಗ್ರೂಪ್ ಅನ್ನು 19,000 ಕೋಟಿ ಮೌಲ್ಯದ ಉದ್ಯಮ ಸಾಮ್ರಾಜ್ಯವಾಗಿ ಬೆಳೆಸಿದ ಛಲಗಾರ ಉದ್ಯಮಿಯ ಕಥೆ ಇದು. ಯಾವುದೇ ಸವಾಲುಗಳನ್ನಾದರೂ ದೃಢ ಸಂಕಲ್ಪದಿಂದ ಎದುರಿಸಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಬೀಟಾ ಗ್ರೂಪ್ ಮುಖ್ಯಸ್ಥ ರಾಜಮೋಹನ್ ಪಿಳ್ಳೈ ಅವರ ಜೀವನ ಕಥೆಯು ಅಪಾರ ಸವಾಲುಗಳ ನಡುವೆಯೂ ಯಶಸ್ಸಿನ ಸಾಮ್ರಾಜ್ಯವನ್ನು ಕಟ್ಟಿದ ಛಲಗಾರಿಕೆಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದೆ. 18 ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡ ರಾಜಮೋಹನ್, ಅನಿರೀಕ್ಷಿತವಾಗಿ ಕುಟುಂಬ ವ್ಯವಹಾರದ ಜವಾಬ್ದಾರಿಯನ್ನು ಹೊರಬೇಕಾಯಿತು. ಆ ಸಮಯದಲ್ಲಿ ಕಂಪನಿಯು 40 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿತ್ತು, 175 ಕೋರ್ಟ್‌ ಕೇಸ್‌ಗಳನ್ನು ಎದುರಿಸುತ್ತಿತ್ತು ಮತ್ತು ತಿಂಗಳಿಗೆ 55 ಲಕ್ಷ ರೂಪಾಯಿ ಬಡ್ಡಿ ಕಟ್ಟಬೇಕಿತ್ತು. ಬ್ಯಾಂಕ್‌ಗಳು ಹಾಗೂ ಸರ್ಕಾರಿ ಏಜೆನ್ಸಿಗಳು ಹಣ ಪಾವತಿಸಲು ತೀವ್ರ ಒತ್ತಡ ಹೇರುತ್ತಿದ್ದವು.

ಇಂತಹ ಕಠಿಣ ಪರಿಸ್ಥಿತಿಯಲ್ಲೂ ರಾಜಮೋಹನ್ ಧೃತಿಗೆಡಲಿಲ್ಲ. ಒಂದೊಂದೇ ಸಮಸ್ಯೆಯನ್ನು ನಿವಾರಿಸುವ ಸಂಕಲ್ಪ ಮಾಡಿದರು. ಅವರ 27 ವರ್ಷಗಳ ನಿರಂತರ ಹೋರಾಟ ಮತ್ತು ದೃಢ ಸಂಕಲ್ಪದ ಫಲವಾಗಿ ಎಲ್ಲ ಸಾಲಗಳನ್ನು ತೀರಿಸಿದರು. ಇಂದು ಬೀಟಾ ಗ್ರೂಪ್ 2 ಬಿಲಿಯನ್ ಡಾಲರ್ (ಸುಮಾರು 19,000 ಕೋಟಿ ರೂಪಾಯಿ) ಮೌಲ್ಯದ ಬೃಹತ್ ಕಂಪನಿಯಾಗಿ ಬೆಳೆದು ನಿಂತಿದೆ. ನಟ್ ಕಿಂಗ್ ಬ್ರ್ಯಾಂಡ್ ಸೇರಿದಂತೆ ಗೋಡಂಬಿ, ಬಾದಾಮಿ, ಪಿಸ್ತಾ, ಜ್ಯೂಸ್, ಲಾಜಿಸ್ಟಿಕ್ಸ್, ಮನರಂಜನೆ ಮತ್ತು ಕನ್ಸಲ್ಟೆನ್ಸಿ ವಲಯಗಳಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಜಮೋಹನ್ ಪಿಳ್ಳೈ ಅವರ ಕಥೆಯು ಯಾವುದೇ ಸವಾಲುಗಳನ್ನಾದರೂ ದೃಢ ಸಂಕಲ್ಪದಿಂದ ಎದುರಿಸಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Aug 27, 2026 04:24 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More