ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ

Updated on: Feb 07, 2025 | 12:24 PM

ರಕ್ಷಿತಾ ತಮ್ಮ ರಾಣಾ ಅವರ ವಿವಾಹವು ನೆರವೇರುತ್ತಿದೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಭಾಗಿ ಆಗುವ ಸಾಧ್ಯತೆ ಇದೆ. ಬೆಂಗಳೂರಿನ ಪ್ಯಾಲೆಸ್ ರಸ್ತೆಯಲ್ಲಿರುವ ರಮನೆ ಮೈದಾನದ ಮುಕ್ತ ಚಾಮರವಜ್ರದಲ್ಲಿ ವಿವಾಹ ನಡೆಯಲಿದೆ ಅನ್ನೋದು ವಿಶೇಷ. ಇದಕ್ಕೆ ಅದ್ದೂರಿಯಾಗಿ ತಯಾರಿ ನಡೆದಿದೆ  ಎಂಬುದು ವಿಶೇಷ.

ರಕ್ಷಿತಾ ಅವರ ಸಹೋದರ ರಾಣಾ ‘ಏಕ್ ಲವ್​ ಯಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಈಗ ಅವರು ರಕ್ಷಿತಾ ಹೆಸರಿನ ಹುಡುಗಿಯ ವರಿಸಿದ್ದಾರೆ. ರಾಣಾ ಸಹೋದರಿ ಹಾಗೂ ಪತ್ನಿ ಇಬ್ಬರ ಹೆಸರು ರಕ್ಷಿತಾ ಅನ್ನೋದು ವಿಶೇಷ. ಇಂದು (ಫೆಬ್ರವರಿ 7) ಮಧ್ಯಾಹ್ನ 12ರಿಂದ 12.30ರ ಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ವಿವಾಹ ಮಂಟಪಕ್ಕೆ ತಮ್ಮನನ್ನು ರಕ್ಷಿತಾ ಅವರು ಕರೆತಂದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 07, 2025 12:23 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More