ಹೊಸ ಬಿಸ್ನೆಸ್ ಆರಂಭಿಸಿದ ರಶ್ಮಿಕಾ ಮಂದಣ್ಣ; ನೆನಪುಗಳನ್ನು ತೆರೆದಿಡೋ ಕೆಲಸ

Updated on: Jul 21, 2025 | 12:24 PM

ರಶ್ಮಿಕಾ ಮಂದಣ್ಣ ಜೀವನದಲ್ಲಿ ಪರ್ಫ್ಯೂಮ್​ಗೆ ವಿಶೇಷ ಸ್ಥಾನ ಇದೆ. ಈ ಕಾರಣಕ್ಕೆ ಅವರು ಇದೇ ಬಿಸ್ನೆಸ್ ಆರಂಭಿಸಿದ್ದಾರೆ. ಈ ವಿಷಯ ತಿಳಿದು ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅವರ ಇನ್​ಸ್ಟಾಗ್ರಾಮ್ ಲಿಂಕ್​ನಲ್ಲಿ ತಮ್ಮ ಹೊಸ ಉದ್ಯಮದ ಬಗ್ಗೆ ಮಾಹಿತಿ ನೀಡಿದ್ದಾರೆ ಅನ್ನೋದು ವಿಶೇಷ.

ನಟಿ ರಶ್ಮಿಕಾ ಮಂದಣ್ಣ ಅವರು ಹೊಸ ಉದ್ಯಮ ಶುರು ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮದೇ ಕ್ಷೇತ್ರದ  ಗಮನ ಹರಿಸಿ ಉದ್ಯಮ ನಡೆಸುತ್ತಾರೆ. ಈಗ ರಶ್ಮಿಕಾ ಕೂಡ ಹಾಗೆಯೇ ಮಾಡಿದ್ದಾರೆ. ಹಾಗಂತ ಇದು ಬಟ್ಟೆ ಬ್ರ್ಯಾಂಡ್ ಅಲ್ಲ. ಅವರು ಆರಂಭಿಸುತ್ತಿರುವುದು ಪರ್ಫ್ಯೂಮ್ ಬಿಸ್ನೆಸ್ ಅನ್ನೋದು ವಿಶೇಷ.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಆದರೆ, ಈ ಬೇಡಿಕೆ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಸಿನಿಮಾ ಆರಂಭಿಸುತ್ತೇನೆ ಎಂದರೆ ಅದು ಕಷ್ಟ. ಆಗ ಯಾರೂ ಅದನ್ನು ಪ್ರೋತ್ಸಾಹಿಸೋದಿಲ್ಲ. ಆದರೆ, ರಶ್ಮಿಕಾ ಮಂದಣ್ಣ ಈ ಬೇಡಿಕೆಯಲ್ಲಿರುವಾಗಲೇ ಪರ್ಫ್ಯೂಮ್ ಬಿಸ್ನೆಶ್ ಶುರು ಮಾಡಿದ್ದಾರೆ. ರಶ್ಮಿಕಾ ಜೀವನದಲ್ಲಿ ಪರ್ಫ್ಯೂಮ್​ಗೆ ವಿಶೇಷ ಸ್ಥಾನ ಇದೆ. ಪರ್ಫ್ಯೂಮ್ ಹಳೆಯ ನೆನಪುಗಳನ್ನು ತೆರೆದಿಡುತ್ತದೆ ಎಂಬುದು ಅವರ ಬಲವಾದ ನಂಬಿಕೆ. ಹೀಗಾಗಿ, ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 21, 2025 12:20 PM